
ಕಲಬುರಗಿ:ಆ.11: ಜಿಲ್ಲೆಯಲ್ಲಿ ಕ್ಷೌರಿಕ ಅಂಗಡಿಯ ಮಾಲಕರಿಗೆ ತಿಳಿಸುವುದೇನೆಂದರೆ ಶ್ರಾವಣ ಮಾಸ ನಿಮಿತ್ಯವಾಗಿ ಮಂಗಳವಾರ ಕ್ಷೌರಿಕ ಅಂಗಡಿಗಳು ಓಪನ್ ಇರುತ್ತದೆ ಎಂದು ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಶರಣಬಸವ ಎಂ ಸೂರ್ಯವಂಶಿ ಆದೇಶ ಮೇರೆಗೆ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಕಾಂತ್ ಜಿ ಬೆಣ್ಣೂರ ತಿಳಿಸಿದ್ದಾರೆ.
ಅಮಾವಾಸ್ಯೆ ಬುಧವಾರ ಬಂದ ಕಾರಣ ಮಂಗಳವಾರ ಒಂದು ದಿವಸ ಮಾತ್ರ ಕ್ಷೌರಿಕ ಅಂಗಡಿ ಪ್ರಾರಂಭ ಮಾಡುವುದಕ್ಕೆ ಜಿಲ್ಲಾ ಸವಿತಾ ಸಮಾಜ ವತಿಯಿಂದ ಅನುಮತಿ ನೀಡಿದೆ ಮುಂದೆ ಎಂದಿನಂತೆ ಸಮಾಜದ ನಿಯಮದ ಪ್ರಕಾರ ಬಂದು ಮಾಡಿ ಕಾಪಾಡಿಕೊಂಡು ಹೋಗಬೇಕು. ಮತ್ತು ಪ್ರತಿಯೊಂದು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿದ ಕಾರಣ ಕ್ಷೌರಿಕ ದರ ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿದೆ ಆದಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಬೆಣ್ಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.