ಆ 15 ಕ್ಕೆ ಸಿಂಥಟಿಕ್ ರನ್ನಿಂಗ್ ಟ್ರ್ಯಾಕ್ ನ
ಜಿಲ್ಲಾ ಕ್ರೀಡಾಂಗಣ ಉದ್ಘಾಟನೆ


ಎನ್.ವೀರಭದ್ರಗೌಡ
ಬಳ್ಳಾರಿ, ಜು.15: ಸಿಂಥಟಕ್ ರನ್ನಿಂಗ್ ಟ್ರ್ಯಾಕ್ ಮೊದಲಾಗಿ ನಿರ್ಮಾಣ ಮಾಡಿರುವ ಜಿಲ್ಲಾ ಕ್ರೀಡಾಂಗಣವನ್ನು ಅಗಷ್ಟ್ 15 ರಂದು ಉದ್ಘಾಟನೆಗೆ ಸಿದ್ದಗೊಂಡಿದೆ.
ಭರದಿಂದ ಸಾಗಿರುವ ಕಾಮಗಾರಿಯನ್ನು ಪರಿಶೀಲನೆ ಮಾಡಿರುವ ಜಿಲ್ಲಾದಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಈ ಮಾಹಿತಿ ನೀಡಿದ್ದಾರೆ.
ನಗರದಲ್ಲಿನ ಜಿಲ್ಲಾ ಕ್ರೀಡಾಂಗಣವನ್ನು ಕ್ರೀಡಾಪಟುಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕು ಎಂಬ ಬೇಡಿಕೆ ಹಳೆಯದಾಗಿತ್ತು.
ಈ ಹಿಂದೆ ಸಹ ಸಿಂಥಟಿಕ್ ಟ್ರಾಕ್ ನಿರ್ಮಿಸಿದ್ದರೂ ಅದು ಗುಣಮಟ್ಟದಿಂದ  ಕೂಡಿರದೇ, ಮಳೆಬಂದರೆ ನೀರು ಟ್ರಾಕ್ ನಲ್ಲಿ ನಿಂತು ಹಾಳಾಗಿ ಹೋಗಿತ್ತು. ಅದಕ್ಕಾಗಿ ಡ್ರೈನ್ ಮೂಲಕ ಹೊಸದಾಗಿ   ಸಿಂಥಟಕ್ ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಕ್ರೀಡಾಂಗಣದ ಅಭಿವೃದ್ಧಿಗೆ ಕ್ರೀಡಾಪಟುಗಳ ಬೇಡಿಕೆ ಇತ್ತು.
ಈಗ  ಜಿಲ್ಲಾ ಖನಿಜ ನಿಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿ ಅಂದಾಜು 7 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ  ಕಳೆದ ಮಾರ್ಚ್ 19 ರಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದರು. ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಕೈಗೊಂಡಿದೆ.
ಕಾಮಗಾರಿ ಭರದಿಂದ ಸಾಗಿದೆ. 196,88ಲಕ್ಷ ರೂ.ವೆಚ್ಚದಲ್ಲಿ ಸಿಂಥಟಕ್ ರನ್ನಿಂಗ್ ಟ್ರ್ಯಾಕ್, 153,25ಲಕ್ಷ ರೂ.ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಳಾಗಿದ್ದ ಜನರು ಕುಳಿತುಕೊಳ್ಳುವ
ಆಸನಗಳ ಸಾಮರ್ಥ್ಯ ಸುಧಾರಣೆ ಮತ್ತು  ಬಂಡ್ ಅಭಿವೃದ್ಧಿ ಪಡಿಸಿದೆ. ಈ ಮೊದಲಿನಂತೆ ಕ್ರೀಡಾಂಗಣದ ಒಳಗಡೆ ಬರದಂತೆ ಫೆನ್ಸಿಂಗ್ ಹಾಕಿದೆ.
ಎರೆಡು ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಬರ್ಫಿಂಗ್ ಕಾಮಗಾರಿ.  97.31ಲಕ್ಷ ರೂ.ವೆಚ್ಚದಲ್ಲಿ   ಆರ್ ಸಿಸಿ ಡ್ರೈನ್ ಮತ್ತು ಅಪ್‌ಗ್ರೇಡೇಶನ್ ಆಪ್ ಫ್ಲಡ್ ಲೈಟ್ಸ್ ಮತ್ತು ಇತರ ಕಾಮಗಾರಿಯನ್ನು ಕೈಗೊಂಡಿದೆ.
ಜಿಲ್ಲಾ ಖನಿಜ ನಿಧಿ ಅನುದಾನದ ಅಡಿ 2.70 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣದ ಹೊರ ಭಾಗದಲ್ಲಿ ಸಿಂಥೆಟಿಕ್  ಹಾಕಿ ಕೋರ್ಟ್‌ ನ್ನು ಸಹ ನಿರ್ಮಾಣದ ಕಾಮಗಾರಿ‌ ನಡೆದಿದೆ.
ಕಾಮಗಾರಿಯ ಗುಣ ಮಟ್ಟ  ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿ ಸರಿಪಡಿಸುವಂತೆ ತಿಳಿಸಿದರು.
ನಗರದ ಕ್ರೀಡಾಪಟುಗಳಿಗೆ ಒಂದೊಳ್ಳೆಯ ಕ್ರೀಡಾಂಗಣದ ಸೌಲಭ್ಯ ಬರುವ ಅಗಷ್ಟ 15 ರಿಂದ ಲಭ್ಯವಾಗಲಿದೆ.
ನಿರ್ಮಾಣ ಮಾಡುವುದಷ್ಟೇ ಅಲ್ಲದೆ ಬಳಕೆಯೂ  ನಿರ್ವಹಣೆಯೂ ಸಮರ್ಪಕವಾಗಿ ಆಗಬೇಕು  ಇಲ್ಲದಿದ್ದರೆ. ಬಿಡಿಎಎ ಫುಟ್ ಬಾಲ್ ಮೈದಾನ ಹಾಳಾಗಿರುವ ರೀತಿ ಆಗಲಿದೆ.