ಆ.15ಕ್ಕೆ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.17: ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಾಲುಮತ ಬಾಂದವರ ಕೋರಿಕೆ ಮೇರೆಗೆ ಬೋರನಹಳ್ಳಿ ಮತ್ತು ಸುಟ್ಟುಕೊಡಿಹಳ್ಳಿ ಉಭಯ ಗ್ರಾಮಗಳ ಮಧ್ಯದ ಸರ್ಕಲ್ ನಲ್ಲಿ
ಸಂಗೊಳ್ಳಿ ರಾಯಣ್ಣ ಪುತ್ತಳಿ ಪ್ರತಿಷ್ಠಾಪಿಸಿ ಆ.15ಕ್ಕೆ ಅನಾವರಣಗೊಳಿಸುವುದಾಗಿ ಶಾಸಕ ಎಸ್.ಭೀಮಾನಾಯ್ಕ ವಾಗ್ದಾನ ಮಾಡಿದರು. ಜುಲೈ 17ರ ತಾಲೂಕಿನ ರಾಂಪುರ ಗ್ರಾಪಂವ್ಯಾಪ್ತಿಯ
ಗ್ರಾಮಗಳಲ್ಲಿ 1.58 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ನಂತರ ಸುದ್ದಿಗಾರರಿಗೆ ಮಾಹಿತಿ ನಿಡಿದರು. ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳು ಗಿಡಗಂಟೆಗಳನ್ನು
ತೆರವುಗೊಳಿಸುವಂತೆ ವಿ.ಎಗೆ ಸೂಚನೆ ನೀಡಿದರು. ರಾಂಪುರ ಗ್ರಾಮಕ್ಕೆ 25 ಲಕ್ಷ ರೂ.ವೆಚ್ಚದ ಗ್ರಂಥಾಲಯ ಮತ್ತು ಸರ್ಕಾರಿ ಶಾಲೆಗೆ 15 ಲಕ್ಷರೂ ವೆಚ್ಚದ ಬಿಸಿ ಊಟ ಕೊಠಡಿ ಹಾಗೂ 15 ಲಕ್ಷ ರೂ.ಗಳಲ್ಲಿ
ಅಂಗನವಾಡಿ ಕೊಠಡಿ ನಿರ್ಮಾಣಕ್ಕೆ ಭರವಸೆ ನೀಡಿದರು
ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಕಾಂಗ್ರೆಸ್ ಮುಖಂಡ ರಾಂಪುರ ಭರಮಣ್ಣ ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ, ಪಿ.ರವಿ, ಸದಸ್ಯೆ ಜ್ಯೋತಿ, ಕರವೇ ಬಸವರಾಜ್‌, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಹಮ್ಮದ್ ಸಾಹೇಬ್, ಪಿಡಿಓ ಉಮಾಪತಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಧಾರುಕೇಶ್ ಇದ್ದರು.