ಆ.13ಕ್ಕೆ ನೂತನ ಸಚಿವರು, ಶಾಸಕರಿಗೆ ಅಭಿನಂದನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.12: ದಾವಣಗೆರೆ ಜಿಲ್ಲಾ ಸಹಕಾರಿಗಳಿಂದ ನೂತನವಾಗಿ ಆಯ್ಕೆಯಾದ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಗಸ್ಟ್ 13ರ ಶನಿವಾರ ಬೆಳಿಗ್ಗೆ 11.30ಕ್ಕೆ ನಗರದ ಶಾಮನೂರು ರಸ್ತೆಯಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್ ಷಣ್ಮುಖಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನೆರವೇರಿಸುವರು. ಡಿಡಿಸಿಸಿ ಬ್ಯಾಂಕಿನ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹರಿಹರದ ಶಾಸಕ ಬಿ.ಪಿ.ಹರೀಶ್, ಚನ್ನಗಿರಿ ಶಾಸಕ ಬಸವರಾಜ್ ವಿ.ಶಿವಗಂಗಾ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರನ್ನು ಸನ್ಮಾನ ಮಾಡಲಾಗುವುದು ಎಂದರು.ಮುಖ್ಯ ಅತಿಥಿಗಳಾಗಿ ಜಗದೀಶಪ್ಪ ಬಣಕಾರ್, ಜೆ.ಎಸ್.ವೇಣುಗೋಪಾಲ, ಎನ್.ಜಿ.ಪುಟ್ಟಸ್ವಾಮಿ, ಬಿ.ಹಾಲೇಶ್, ಹೆಚ್.ಕೆ.ಬಸಪ್ಪ, ಸಿರಿಗೆರೆ ರಾಜಣ್ಣ, ಆರ್.ಎಂ.ರವಿ, ಬಿ.ಶೇಖರಪ್ಪ, ಜಿ.ಡಿ.ಗುರುಸ್ವಾಮಿ, ಬೇತೂರು ರಾಜಣ್ಣ, ಶೋಭಾ ಉಮೇಶ್‍ಕುಮಾರ್, ಕೋಗುಂಡಿ ಬಕ್ಕಪ್ಪ, ಆರ್.ಜಿ.ಶ್ರೀನಿವಾಸಮೂರ್ತಿ, ಕೆ.ಹೆಚ್.ಷಣ್ಮುಖಪ್ಪ, ಡಿ.ಎಸ್.ಸುರೇಂದ್ರ, ಸಿ.ಚಂದ್ರಶೇಖರ್, ಬಿ.ಜಿ.ಬಸವರಾಜಪ್ಪ, ಕೆ.ಎನ್.ಸೋಮಶೇಖರ್, ಹೆಚ್.ಆರ್.ಲಿಂಗರಾಜ್, ಎಸ್.ಬಿ.ಶಿವಕುಮಾರ್, ಡಿ.ಎಂ.ಮುರುಗೇಂದ್ರಯ್ಯ, ಎಂ.ಶಿವಾನಂದಪ್ಪ, ಬಿ.ಕೆ.ಶಿವಕುಮಾರ್, ಎಸ್.ಕೆ.ಪವಿತ್ರ, ನಿರ್ಮಲ ಸುಭಾಷ್, ಎಂ.ಎಸ್.ಪ್ರಭುದೇವ, ಸಿ.ವೆಂಕಟೇಶ್‍ನಾಯ್ಕ, ಹೆಚ್.ಬಿ.ಭೂಮೇಶ್ವರ್, ಡಿ.ಎನ್.ಮಹೇಶ್ವರಪ್ಪ, ಆರ್.ಸಂಜೀವ್‍ಕುಮಾರ್, ಕೆ.ಹೆಚ್.ರುದ್ರಪ್ಪ, ಜಿ.ವಿ.ಕುಮಾರ್, ತಿಮ್ಲಾಪುರ ಬಸವರಾಜ, ಕೆ.ಚಂದ್ರಪ್ಪ, ಸಿ.ಶಿವಕುಮಾರ್ ಆಗಮಿಸುವರು ಎಂದರು.