ಆ. 12 ರಿಂದ ಇ.ವಿ.ಎಂ. ಮತಯಂತ್ರಗಳ ಎಫ್.ಎಲ್.ಸಿ ಕಾರ್ಯ ಆರಂಭ

ಕಲಬುರಗಿ,ಆ.11: ಮುಂಬರುವ 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಇ.ವಿ.ಎಂ ವೇರ್ ಹೌಸ್ ನಲ್ಲಿ ಇದೇ ಆಗಸ್ಟ್ 12 ರಿಂದ ಇ.ವಿ.ಎಂ, ವಿವಿಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳ ಪ್ರಥಮ ಹಂತದ ತಪಾಸಣೆ (ಎಫ್.ಎಲ್.ಸಿ) ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಆಗಸ್ಟ್ 12 ರಿಂದ 28ರ ವರೆಗೆ ಒಟ್ಟು 17 ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಪ್ರಥಮ ಹಂತದ ತಪಾಸಣೆ ಕಾರ್ಯ ಪೂರ್ಣಗೊಳಿಸಲಾಗುವುದು. ರಾಜಕೀಯ ಪಕ್ಷಗಳು ಎಫ್.ಎಲ್.ಸಿ ಕಾರ್ಯ ವೀಕ್ಷಣೆಗೆ ಓರ್ವ ಪ್ರತಿನಿಧಿಯನ್ನು ನಿಯೋಜಿಸಬಹುದಾಗಿದೆ ಎಂದರು.
ಎಲೆಕ್ಟ್ರಾನಿಕ್ ಕಾಪೆರ್Çರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ 16 ಇಂಜಿನಿಯರ್‍ಗಳು ನಡೆಸುವ ಎಫ್.ಎಲ್.ಸಿ ಕಾರ್ಯಾಚರಣೆಯಲ್ಲಿ 4,816 ಬ್ಯಾಲೆಟ್ ಯೂನಿಟ್, 3,359 ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟ್ 3,550 ಯಂತ್ರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಈ ಅವಧಿಯಲ್ಲಿ ಮೋಬೈಲ್, ಸ್ಮಾರ್ಟ್ ವಾಚ್ ನಿμÉೀಧಿಸಲಾಗಿದೆ ಎಂದರು.
ಇನ್ನು 2023 ಸಾರ್ವತ್ರಿಕ ವಿಧಾನಸಭೆಯ ಚುನಾವಣೆಯ 40-ಚಿತ್ತಾಪೂರ ಹಾಗೂ 45-ಗುಲಬರ್ಗಾ ಉತ್ತರ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವುದರಿಂದ, ಸದರಿ ಕ್ಷೇತ್ರದ ಇ.ವಿ.ಎಂ.ಗಳನ್ನು ಹೊರತುಪಡಿಸಿ ಪರಿಶೀಲನೆ ನಡೆಸಲಾಗುವುದೆಂದು ರಾಜಕೀಯ ಪಕ್ಷಗಳಿಗೆ ಡಿ.ಸಿ. ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಪರಿಶೀಲನಾ ಕಾರ್ಯದ ಎಸ್.ಓ.ಪಿ. ಪ್ರತಿಗಳನ್ನು ಸಭೆಯಲ್ಲಿದ್ದ ರಾಜಕೀಯ ಪಕ್ಷಗಳ ಮುಖಂಡರಿಗೆ ನೀಡಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾ ತಹಶೀಲ್ದಾರ್ ಪಂಪಯ್ಯ ಸೇರಿದಂತೆ ರಾಜಕೀಯ ಪಕ್ಷದ ಮುಖಂಡರು ಇದ್ದರು.