ಆ.10ರತನಕ ನೂಪರ್ ಶರ್ಮಾರನ್ನು ಬಂಧಿಸಿದಂತೆ ಸುಪ್ರೀಂ ಆದೇಶ

ನವದೆಹಲಿ, ಜು.19- ಪ್ರವಾದಿ ಮೊಹ್ಮದ್ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನುತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಆಗಸ್ಟ್ 10ರತನಕ ಸುಪ್ರೀಂಕೋರ್ಟ್ ಬಂಧಿಸದಂತೆ ಆದೇಶಿಸಿದೆ.
ಈ ಆದೇಶದಿಂದಾಗಿ ನೂಪರ್ ಶರ್ಮಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಬಂಧನದಿಂದ ರಕ್ಷಣೆ ಕೋರಿ ನೂಪರ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ತಿಂಗಳು 10ರವರೆಗೆ ನೂಪರ್ ಅವರನ್ನು ಬಂಧಿಸಿದಂತೆ ಆದೇಶಿಸಿತು.ಈ ಸಂಬಂಧ ಕೇಂದ್ರ ಮತ ರಾಜ್ಯ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.
ನೂಪುರ್‌ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದು, ಆಕೆಗೆ ಬಂಧನದಿಂದ ತಡೆಯಾಜ್ಞೆ ಹಾಗೂ ರಕ್ಷಣೆ ನೀಡಬೇಕು ಎಂದು ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.
ನೂಪರ್ ಅವರ ಜೀವಕ್ಕೆ ಗಂಭೀರ ಬೆದರಿಕೆ ಇದೆ ಎಂದು ನೂಪುರ್ ಶರ್ಮಾ ಪರ ವಾದ ಮಂಡಿಸಿದ ವಕೀಲ ಮಣಿಂದರ್ ಸಿಂಗ್ ಹೇಳಿದರು.
ಆದೇಶವನ್ನು ಉಚ್ಚರಿಸುವಾಗ, ನ್ಯಾಯ ಪೀಠ ಅರ್ಜಿದಾರರ ಹತ್ಯೆಯ ಬಗ್ಗೆ ಸಲ್ಮಾನ್ ಚಿಶ್ತಿಯ ವೈರಲ್ ಹೇಳಿಕೆಯನ್ನು ಸಹ ಗಮನಕ್ಕೆ ತೆಗೆದುಕೊಂಡಿತು. ಯುಪಿಯ ವ್ಯಕ್ತಿಯೊಬ್ಬರು ಅರ್ಜಿದಾರರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿರುವುದನ್ನು ನ್ಯಾಯಪೀಠ ಆಲಿಸಿತು.
ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಎಫ್ಐಆರ್ ದಾಖಲಿಸಲಾಗಿದೆ.