ಆ.1 ರಂದು ಶಿಕ್ಷಣ ಪ್ರೇಮಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ.ಮಹಾದೇವಪ್ಪ ರಾಂಪೂರೆಯವರ ಜನ್ಮಶತಮಾನೋತ್ಸವ

ಕಲಬುರಗಿ:ಜು.28:ಕಲ್ಯಾಣ ಕರ್ನಾಟಕದ ಶಿಕ್ಷಣ ಶಿಲ್ಪಿ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ.ಮಹಾದೇವಪ್ಪ ರಾಂಪೂರೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ:01-08-2022 ರ ಸೋಮವಾರದಂದು ಬೆಳಿಗ್ಗೆ 11.30 ಗಂಟೆಗೆ ಸ್ಯಾಕ್‍ಬಿಲ್ಡಿಂಗ್ ಸಭಾಂಗಣ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ದಿವ್ಯಸಾನಿಧ್ಯವನ್ನು ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮೀಜಿ, ಹಿರೇಮಠ ಸಂಸ್ಥಾನ, ಸುಕ್ಷೇತ್ರ ಹಾರಕೂಡ ರವರು ವಹಿಸುವರು. ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ.ಸಿ.ಬಿಲಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ದಿವಂಗತ ಮಹಾದೇವಪ್ಪ ರಾಂಪೂರೆಯವರ ದ್ವೀತಿಯ ಸುಪುತ್ರ, ಸಿ.ಎಂ.ಆರ್. ಹೆಲ್ತಕೇರ್ ಮಿಸ್ಸಿಸಾದ, ಕೆನಡಾದ ನಿರ್ದೇಶಕರಾದ ಡಾ.ಅಜಿತ್ ರಾಂಪೂರೆ, ಗೌರವ ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮದ ಸಂಚಾಲಕರಾದ ಡಾ.ಮಹಾದೇವಪ್ಪ ರಾಂಪೂರೆ, ಜಂಟಿ ಕಾರ್ಯದರ್ಶಿಗಳು, ಹೈ.ಕ.ಶಿ ಸಂಸ್ಥೆ ಉಪಸ್ಥಿತರಿರುವರು.

ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂಧಿಗಳಿಗೆ ಮತ್ತು ಪ್ರಾಚಾರ್ಯರಿಗೆ ಅತ್ಯುತ್ತಮ ಶಿಕ್ಷಕ ಮತ್ತು ಅತ್ಯುತ್ತಮ ಪ್ರಾಚಾರ್ಯರ ಪ್ರಶಸ್ತಿ ನೀಡಿ ಗೌರವಿಸುವರು.

ಈ ಜನ್ಮಶತಮಾನೋತ್ಸವದ ಅಂಗವಾಗಿ ಹೈ.ಕ.ಶಿ ಸಂಸ್ಥೆಯ ಸದಸ್ಯರಿಗೆ ಹಾಗೂ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವರ್ಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳಿಗೆ ಮತ್ತು ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿನಾಂಕ: 29, 30 ಹಾಗೂ 31ರ ಜುಲೈ-2022 ರಂದು ಬಸವೇಶ್ವರ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಅದೇ ರೀತಿಯಾಗಿ ಸದರಿ ದಿನಾಂಕಗಳಂದು ಆಸಕ್ತರಿಗೆ ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹೈ.ಕ.ಶಿ ಸಂಸ್ಥೆಯ ಸದಸ್ಯರು ಹಾಗೂ ಸಿಬ್ಬಂಧಿ ವರ್ಗದವರು ಹಾಗೂ ಕುಟುಂಬಸ್ಥರು ತಮ್ಮ ಗುರುತಿನ ಚೀಟಿಯೊಂದಿಗೆ ಭೇಟಿಕೊಟ್ಟು, ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.

ಇದೇ ರೀತಿ ಜನ್ಮ ಶತಮಾನೋತ್ಸವದ ಅಂಗವಾಗಿ ಸಂಸ್ಥೆಯ ಎಲ್ಲಾ ಕಾಲೇಜುಗಳಲ್ಲಿ ದಿನಾಂಕ: 29, 30 ಹಾಗೂ 31ರ ಜುಲೈ-2022 ರಂದು ಸಸಿ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೈ.ಕ.
ಸಿ. ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ .ಸಿ. ಬಿಲಗುಂದಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಂಚಾಲಕರಾದ ಡಾ. ಮಹಾದೇವಪ್ಪ ರಾಂಪೂರೆ ಉಪಸ್ಥಿತರಿದ್ದರು.