ಆ.1 ರಂದು ಪುರಸ್ಕಾರ ಪ್ರದಾನ

ಧಾರವಾಡ,ಜು30: ಭೂಮಿ ಪ್ರತಿಷ್ಠಾನ ಹಾಗೂ ಅರವಳದ ಪ್ರತಿಷ್ಠಾನ ವತಿಯಿಂದ ದಿವಂಗತ ಯಲ್ಲಪ್ಪ ಅರವಳದ ಅವರ ಸ್ಮರಣಾರ್ಥ ಭೂಮಿ ಸಾಹಿತ್ಯ ಪುರಸ್ಕಾರ ಪ್ರಧಾನ ಸಮಾರಂಭವನ್ನು ಆಗಸ್ಟ್ 1ರಂದು ಏರ್ಪಡಿಸಲಾಗಿದೆ ಶಿವಾನಂದ ಟವಳಿ ಹೇಳಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಭಾರಿಯ ಪುರಸ್ಕಾರ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಶ್ರೀ ಮೋಟಗಿಮಠ, ಅಥಣಿ ಇವರ ವಿರಚಿತ “ಮಹಾತ್ಮರ ಚರಿತಾಮೃತ” ಕೃತಿಗೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅರವಿಂದ ಬೆಲ್ಲದ ನೇರವೇರಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಆರ್.ಬಿ.ಚಿಲುಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಜೆ.ಎ ಹಡಗಲಿ, ಹಿರಿಯ ನ್ಯಾಯವಾದಿ ಅರುಣ ಜೋಶಿ, ಮಹಾನಗರ ಪಾಲಿಕೆ ಸದಸ್ಯರಾದ ನಿಲವ್ವ ಅರವಳದ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮೌಲ್ಯಮಾಪನ ಕುಲಸಚಿವ ಡಾ.ಎನ್.ಎಂ ಸಾಲಿ ಭಾಗವಹಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಪಾಟೀಲ, ಬಸವರಾಜ ಅರವಳದ, ಮಾರುತಿ ಇಂಗನಳ್ಳಿ ಸೇರಿದಂತೆ ಹಲವರು ಇದ್ದರು.