ಆ.1 ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ರೈತರ ಮುತ್ತಿಗೆ

ಮುಳಬಾಗಿಲು,ಜು.೩೦- ಚೆನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂಮಿ ಕಳೆದುಕೊಂಡ ರೈತರ ಮರಗಿಡಗಳ ಪರಿಹಾರ ನೀಡಲು ಮೀನಾ ಮೇಷ ಎಣಿಸುತ್ತಿರುವ ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಿರುದ್ದ ಆ.೧ ರ ಮಂಗಳವಾರ ಜಾನುವಾರುಗಳ ಸಮೇತ ಪಾಲಸಂದ್ರ ಲೇಔಟ್ ಕಛೇರಿಗೆ ಮುತ್ತಿಗೆ ಹಾಕಲು ಗಡಿಭಾಗದ ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆಂಧ್ರಪ್ರದೇಶದಲ್ಲಿ ಪ್ರತಿ ಎಕೆರೆಗೆ ೫೦ ಲಕ್ಷ ಹೊಸಕೋಟೆ ಹಾಗೂ ಮಾಲೂರಿನಲ್ಲಿ ೧.೫೦ ಕೋಟಿ ನಾವು ಗಡಿಭಾಗದ ರೈತರು ಏನು ಪಾಪ ಮಾಡಿದ್ದರೋ ಗೊತ್ತಿಲ್ಲ. ನಮ್ಮ ಭೂಮಿಗೆ ಮಾತ್ರ ೩.೮೦ ಲಕ್ಷಗಳು ಮಾತ್ರ ನಮ್ಮ ಭೂಮಿಗೂ ಕೋಟಿ ಬೆಲೆ ಬಾಳುವ ಭೂಮಿಗೂ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಆದರೂ ಭೂ ಸ್ವಾದೀನ ಮಾಡಿಕೊಂಡಾಗ ಲಂಚ ಕೇಳಿದ ಅಧಿಕಾರಿಗಳಿಗೆ ನಮ್ಮ ರಕ್ತವನ್ನು ಮಾರಿಕೊಟ್ಟಿದ್ದರೆ ನಮ್ಮ ಸಮಸ್ಯೆ ಬಗೆ ಹರಿಯುತ್ತಿತ್ತು. ಆದರೆ ಇಂದು ಕಡೆಯದಾಗಿ ನಮ್ಮ ಮನೆಯಲ್ಲಿರುವ ಮೂಕ ಪ್ರಾಣಿಗಳಾದ ಕೋಳಿ, ಕುರಿ, ಹಸುಗಳನ್ನು ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಸೋಮವಾರ ನೀಡುತ್ತಿದ್ದೇವೆ. ದಯವಿಟ್ಟು ಅಧಿಕಾರಿಗಳು ಆನಂದಿಂದ ನಮ್ಮ ಕಾಣಿಕೆಯನ್ನು ಸ್ವೀಕರಿಸಿ ನಮ್ಮ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಸಭೆಯಲ್ಲಿ ನೊಂದ ರೈತ ಮಹಿಳೆ ಮಂಗಮ್ಮ ಮತ್ತು ರಾಜಣ್ಣ ಒತ್ತಾಯಿಸಿದರು.
ಬಡವರ ಕಣ್ಣೀರು ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ. ಪರಿಹಾರಕ್ಕಾಗಿ ೮ ವರ್ಷಗಳಿಂದ ೧೧ ಜನ ರೈತರು ಎಲ್ಲಾ ಅಧಿಕಾರಿಗಳು ಸಂಸದರು, ಶಾಸಕರ, ಕೈಕಾಲು ಹಿಡಿದು ಬೇಡಿಕೊಂಡರು ಮನಸ್ಸು ಕರಗದ ಕಣ್ಣು ಕಾಣಿಸದ ರೈತ ವಿರೋದಿ ದೋರಣೆಯನ್ನು ನೊಂದ ರೈತರು ಅವ್ಯವಸ್ಥೆ ವಿರುದ್ದ ಹಿಡಿ ಶಾಪಹಾಕಿದರು. ಕೊಟ್ಟ ಮಾತಿಗೆ ತಪ್ಪದ ಬಡವನನ್ನು ನಡೆಸಿಕೊಡುವ ರೀತಿ ಇದೇನಾ ಭೂ ಸ್ವಾಧೀನ ಮಾಡಿಕೊಳ್ಳಲು ಬಂದಾಗ ನಮ್ಮ ಪರಿಹಾರ ಕೊಟ್ಟ ನಂತರ ಭೂಮಿಕೊಡುತ್ಥೇವೆಂದು ಹಠ ಅವತ್ತು ಹಿಡಿದಿದ್ದರೆ, ಇವತ್ತು ಅಧಿಕಾರಿಗಳ ಕಾಲು ಕೈ ಹಿಡಿಯಬೇಕಾಧ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ ಎಂದು ಸಭೆಯಲ್ಲಿ ಕಣ್ಣೀರು ಹಾಕಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರಸ್ತೆ ಕಾಮಗಾರಿ ಸ್ಥಳದಲ್ಲಿ ದರಣಿ ಮಾಡಿದರೆ ಕಾನೂನಿನ ಹಸ್ತ್ರ ಬಳಿಸಿ ಗುತ್ತಿಗೆದಾರರು ತೆರೆಮರೆಯಲ್ಲಿ ನಿಂತು ನಗಾಡುತ್ತಾರೆ, ಇತ್ತ ಪ್ರತಿ ಹೋರಾಟ ಮಾಡಿದ ಸಂದರ್ಭದಲ್ಲಿ ಅಧಿಕಾರಿಗಳು ಬಂದು ೨೪ ಗಂಟೆ ಸಮಯ ಕೊಡಿ ನಿಮ್ಮ ಪರಿಹಾರ ಕೊಡುತ್ತೇವೆಂದು ನಂಬಿಸಿ ಹಗಲು ನೋಡಿದ ಭಾವಿಯಲ್ಲಿ ರಾತ್ರಿವೇಳೆ ದೂಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.