
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.02:- ಬಸವರಾಜೇಂದ್ರ ಆಸ್ಪತ್ರೆಯ 16 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಕ್ತನಿಧಿ ಕೇಂದ್ರಉದ್ಘಾಟನೆ, ಬಸವರಾಜೇಂದ್ರ ಮತ್ತು ಅಪೆÇಲೊ ಡಯಾಗ್ನೋಸ್ಟಿಕ್ ಕೇಂದ್ರವನ್ನುಉದ್ಘಾಟನೆ ಮಾಡಲಾಗುತ್ತದೆಎಂದು ಬಸವರಾಜೇಂದ್ರಆಸ್ಪತ್ರೆ ಮತ್ತು ಬಸವರಾಜೇಂದ್ರ ನಸಿರ್ಂಗ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಡಾ. ಎಂ. ಬಸವರಾಜೇಂದ್ರ ಹೇಳಿದರು.
ಅವರುಇಂದುಚಾಮರಾಜನಗರಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.04 ರಂದು ವಾರ್ಷಿಕೋತ್ಸವದ ಪ್ರಯುಕ್ತರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿದ್ದು, ಅಂದುಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಸ್ವಯಂಪ್ರೇರಿತವಾಗಿ ರಕ್ತದಾನಿಗಳು ರಕ್ತದಾನ ಮಾಡಬಹುದಾಗಿದೆ. ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಿಯಾಲ ಮಠದಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ವಹಿಸಲಿದ್ದು, ಬಸವರಾಜೇಂದ್ರಕಾಲೇಜ್‍ಆಫ್ ನರ್ಸಿಂಗ್(ಬಿಎಸ್ಸಿ, ನಸಿರ್ಂಗ್) ಉದ್ಘಾಟನೆಯನ್ನು ಸಂಸದ ಶ್ರೀನಿವಾಸ್ ಪ್ರಸಾದ್ ನೆರವೇರಿಸಲಿದ್ದಾರೆ. ರಕ್ತನಿಧಿ ಕೇಂದ್ರವನ್ನುರೇμÉ್ಮ ಮತ್ತು ಪಶುಸಂಗೋಪನೆ ಇಲಾಖೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ. ವೆಂಕಟೇಶ್, ಹೈಟೆಕ್ ಡಯಾಗ್ನೊಸ್ಟಿಕ್ಸ್ ಕೇಂದ್ರವನ್ನುಉದ್ಘಾಟಿಸಲಿದ್ದು, ಶಾಸಕ ಹೆಚ್. ಎಂ. ಗಣೇಶಪ್ರಸಾದ್, ಐಸಿಯು(ತೀವ್ರ ನಿಗಾಘಟಕ) ವನ್ನು ಶಾಸಕ ಎ. ಆರ್. ಕೃಷ್ಣಮೂರ್ತಿ, ವಾರ್ಷಿಕೋತ್ಸವಕಾರ್ಯಕ್ರಮವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ, ರಕ್ತದಾನ ಶಿಬಿರಕ್ಕೆ ಶಾಸಕ ಎಂ. ಆರ್. ಮಂಜುನಾಥ್ ಚಾಲನೆ ನೀಡಲಿದ್ದಾರೆಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ. ಟಿ. ಶಿಲ್ಪಾನಾಗ್, ಜಿಪಂ ಸಿಇಒ ಎಸ್. ಪೂವಿತಾ, ಎಸ್ಪಿ ಪದ್ಮಿನಿ ಸಾಹು, ಸಿಮ್ಸ್ ಡೀನ್‍ಡಾ. ಹೆಚ್. ಸಿ. ಮಂಜುನಾಥ್, ಡಿಹೆಚ್‍ಓಡಾ. ಕೆ. ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಘಟಕ ಕಾರ್ಯಕ್ರಮ ಅಧಿಕಾರಿಡಾ. ರವಿಕುಮಾರ್, ಬದನಗುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಗುಣಸ್ವಾಮಿ ಸೇರಿದಂತೆಇತರರು ಭಾಗವಹಿಸಲಿದ್ದಾರೆಎಂದುಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.
ಮುಂದಿನ ವರ್ಷದ 17 ನೇ ವಾರ್ಷಿಕೋತ್ಸವದ ವೇಳೆಗೆ ಜಿಲ್ಲೆಯಲ್ಲಿಟ್ರಾಮೋ ಸೆಂಟರ್, ಕಣ್ಣಿನಚಿಕಿತ್ಸಾ ಕೇಂದ್ರ ಹಾಗೂ ಹೃದ್ರೋಗ ಶಸ್ತ್ರಚಿಕಿತ್ಸೆ ಕೇಂದ್ರ ತೆರೆಯಲುಗುರಿ ಹೊಂದಿರುವುದಾಗಿಡಾ.ಬಸವರಾಜೇಂದ್ರತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಡಾ. ಶ್ವೇತಾಶಶಿಧರ್, ಆಸ್ಪತ್ರೆಯ ಮ್ಯಾನೇಜರ್‍ತೇಜಸ್, ಆನಂದ್‍ಇದ್ದರು.