ಆ.೭ ಸೂರ್ಯೋದಯ ವಾಕಿಂಗ್ ಕ್ಲಬ್ ೯ನೇ ವಾರ್ಷಿಕೋತ್ಸವ ಅಭಿನಂದನಾ ಸಮಾರಂಭ

ರಾಯಚೂರು.ಆ.೫- ಸೂರ್ಯೋದಯ ವಾಕಿಂಗ್ ಕ್ಲಬ್ ನ ೯ನೇ ವಾರ್ಷಿಕೋತ್ಸವ ಹಾಗು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ,ಸರ್ಯರತ್ನ ಪ್ರಶಸ್ತಿ ಪ್ರದಾನ,ಕ್ರಿಕೆಟ್ ಟೂರ್ನಮೆಂಟ್ ವಿಜೇತ ತಂಡಕ್ಕೆ ಟ್ರೋಫಿ ವಿತರಣೆ ಹಾಗೂ ಸಂಚಾರಿ ಉಚಿತ ಕೋಚಿಂಗ್ ಕ್ಲಾಸ್ ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉಚಿತ ಕೋಚಿಂಗ್ ಕ್ಲಾಸ್ ನೀಡಿದ ಸಂಪನ್ಮೂಲ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಆಗಸ್ಟ್ ೭ ರಂದು ನಗರದ ರಂಗಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದಾರೆ.ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಸಾಧಕರಿಗೆ ಸನ್ಮಾನವನ್ನು ಮಾಡಲಿದ್ದಾರೆ.ಶಿಕ್ಷಕರಿಗೆ ಸನ್ಮಾನವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜ ಮಾಡಲಿದ್ದು,ಶಾಲಾ ಶಿಕ್ಷಕ ಮತ್ತು ಸಾಕ್ಷರತಾ ಇಲಾಖೆಯ ಅಪರ ಕಾರ್ಯದರ್ಶಿ ಚಂದ್ರಶೇಖರ್ ಎಂ.ಗಂಗಪ್ಪ ಅವರು ಮಾಡಲಿದ್ದಾರೆ.ಸೂರ್ಯ ಪ್ರಶಸ್ತಿ ಪ್ರದಾನವನ್ನು ಸಹಾಯಕ ಆಯುಕ್ತ ರಜನಿಕಾಂತ ಮಾಡಲಿದ್ದಾರೆ.ಟ್ರೋಫಿ ವಿತರಣೆಯನ್ನು ಕೆ.ನೀಲಾ ಅವರು ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಸೂರ್ಯೋದಯ ವಾಕಿಂಗ್ ಕ್ಲಬ್ ನ ಅಧ್ಯಕ್ಷ ಬಿ.ಬಸವರಾಜ ಅವರು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೋಲ ಅಂಜ ನೆಯ,ಆರ್ ಡಿ. ಎ.ಅಧ್ಯಕ್ಷ ತಿಮ್ಮಪ್ಪ ನಾಡಗೌಡ,ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅರ್.ಗುರುನಾಥ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ಅಂದು ಸಂಜೆ ೬.೩೦ ಕ್ಕೆ ಡಾ.ಅಮರೇಶ ನುಗಡೋಣಿ ರವರ ಬೆಳಕೂ ಅದೇ ಕತ್ತಲೆಯೂ ಅದೇ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಆಕಾಶ ಮೆಲೋಡಿಯಸ್ ರಾಯಚೂರು ತಂಡದಿಂದ ರಸಮಂಜರಿ ಕಾರ್ಯಕ್ರಮವನ್ನು
ಹಮ್ಮಿಕೊಳಾಗಿದೆ ಎಂದರು.
ಈ ಸಂದರ್ಭದಲ್ಲಿ ಎಚ್.ಮುನಿಸ್ವಾಮಿ,ಆರ್.ಬಸವರಾಜ,ನರಸಿಂಹರೆಡ್ದಿ,ಆಯ್ಯನಗೌಡ ಇದ್ದರು.