ಆ.೭ ರಂದು ಜಿಲ್ಲೆಗೆ ಕೆಪಿ ನಂಜುಂಡಿ ಆಗಮನ

ಸಿರವಾರ.ಆ.೦೪- ಅಖಿಲ ಭಾರತ ವೀಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿಯವರು ಆ. ೭ ರಂದು ಜಿಲ್ಲೆಗೆ ಆಗಮಿಸಿ, ಸಿರವಾರ, ಮಾನ್ವಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಘಟಕ ರಚನೆ ಮಾಡುತ್ತಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾದ್ಯಕ್ಷ ಆನಂದಕುಮಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಪಿ ನಂಜುಂಡಿ ಅವರು ರಾಜ್ಯಾಧ್ಯಕ್ಷರಾದ ನಂತರ ನಮ್ಮ ಸಮಾಜಕ್ಕೆ ವಿಶ್ವಕರ್ಮ ಜಯಂತಿ, ವಿಶ್ವ ಕರ್ಮ ಅಭಿವೃದ್ಧಿ ನಿಗಮ ಹಾಗೂ ಅಮರಶಿಲ್ಪ ಜಕಣಾಚಾರಿ ಸ್ಮರಣ ದಿನಾಚರಣೆ ಮೂರು ಕೊಡುಗೆಯನ್ನು ನೀಡಿದ್ದಾರೆ.
ಈಗಾಗಲೇ ಸಮುದಾಯವನ್ನು ಎಸ್.ಟಿ ಮಿಸಲಾತಿ ನೀಡಬೇಕು ಎಂವ ಹೋರಾಟಕ್ಕೆ ನಮ್ಮ ತಾಲೂಕಿನಿಂದಲೂ ಬೆಂಬಲ ಇದೆ. ಅಗಷ್ಟ ೭ ರಂದು ಮಾನ್ವಿ ತಾಲೂಕಿನ ಸಂಗಾಪೂರು, ಪೋತ್ನಾಳ, ಸಿರವಾರ ತಾಲೂಕಿನ ಬಲ್ಲಟಗಿ, ಬಳಗನೂರು ಗ್ರಾಮಗಳಿಗೆ ಬೇಟಿ ನೀಡಿ ಸಮಾಜದ ಮುಖಂಡರ ಸಮಸ್ಯೆಗಳನ್ನು ಆಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮೋನಪ್ಪ ಬಲ್ಲಟಗಿ, ವಿಶ್ವನಾಥ ಬಲ್ಲಟಗಿ, ವಿರುಪಾಕ್ಷಿ ಕಂಬಾರ, ಶಿವರಾಜ ಬಲ್ಲಟಗಿ, ಸೆರಿದಂತೆ ಇನ್ನಿತರರು ಇದ್ದರು.