ಆ.೬ ಸಹಯೋಗ ಶಿಕ್ಷಕರ ತರಬೇತಿ ಶಿಬಿರ

ರಾಯಚೂರು,ಆ.೩-ಪತಂಜಲಿ ಯೋಗ ಟ್ರಸ್ಟ್ ವತಿಯಿಂದ ಆಗಸ್ಟ್ ೬ ರಿಂದ ೨೫ರವರೆಗೆ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ಕಾರ್ಯಾದರ್ಶಿ ಪರಮೇಶ್ವರ್ ಸಾಲಿಮಠ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ನಗರದ ಜೈನ ಮಂದಿರ ರಸ್ತೆಯಲ್ಲಿರುವ ಬೂಬ್ ಭವನ್‌ದಲ್ಲಿ ತರಬೇತಿ ಶಿಬಿರ ನಡೆಯಲಿದೆ.ಈ ಶಿಬಿರವು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಹರಿದ್ವಾರದಲ್ಲಿ ಸ್ವಾಮಿ ರಾಮದೇವ ಜಿ ಮಹಾರಾಜ ಅವರಿಂದ ತರಬೇತಿ ಪಡೆದ ನುರಿತ ಯೋಗ ಶಿಕ್ಷಕರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.ಯೋಗ, ಪ್ರಾಣಾಯಾಮ, ಧ್ಯಾನ, ಸೂಕ್ಷ್ಮ ವ್ಯಾಯಾಮ, ಆಸನಗಳು, ಅಕ್ಯು ಪ್ರೆಶರ್, ಮುದ್ರೆ ಯೋಗಿಕ್ ಜಾಗಿಂಗ್ ಮುಂತಾದ ತರಬೇತಿ ನೀಡಲಾಗುತ್ತದೆ ಎಂದ ಅವರು,
ಬೆನ್ನು ನೋವು, ಸೊಂಟ ನೋವು, ಮಂಡಿ ನೋವು, ಮಧುಮೇಹ, ರಕ್ತದೊತ್ತಡ (ಬಿ.ಪಿ), ಬೊಜ್ಜು ನಿವಾರಣೆ ಸೇರಿದಂತೆ ಇನ್ನು ಅನೇಕ ರೋಗಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.
ಯೋಗದ ಜೊತೆಗೆ ಆಯುರ್ವೇದ, ಮನೆಮದ್ದು, ಆಹಾರ ಪದ್ಧತಿ, ಉತ್ತಮ ಜೀವನ ಶೈಲಿ ಮತ್ತು ದೇಹ ಶುದ್ಧೀಕರಣ, ಅಷ್ಟಾಂಗ ಯೋಗ, ಕುಂಡಲಿನಿ ಜಾಗರಣ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇದಲ್ಲದೇ ಶಿಬಿರದಲ್ಲಿ ಭಾಗವಹಿಸುವವರಿಗೆ ಪತಂಜಲಿ ಯೋಗ ಟ್ರಸ್ಟ್ ವತಿಯಿಂದ ಸಹಯೋಗ ಶಿಕ್ಷಕ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಜೊತೆಗೆ ಪಠ್ಯಕ್ರಮದ ಪುಸ್ತಕ, ನೋಟ್‌ಬುಕ್, ಪೆನ್ನು ವಿತರಿಸಲಾಗುತ್ತದೆ.
ಹೀಗಾಗಿ ಶಿಬಿರದಲ್ಲಿ ಪಾಲ್ಗೊಳ್ಳುವವರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ನೋಂದಣಿಗಾಗಿ ಋತುರಾಜ ಗೌಡ, ಪತಂಜಲಿ ಚಿಕಿತ್ಸಾಲಯ, ಅಮತ್‌ಕರ ಬಿಲ್ಡಿಂಗ್, ಮಹಾವೀರ ಸರ್ಕಲ್ ಹತ್ತಿರ, ಜೈನ ಮಠದ ಎದುರುಗಡೆ, ರಾಯಚೂರು-೫೮೪೧೦೧ ಇಲ್ಲಿ ನೇರವಾಗಿ ಬಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಠೋಬರಾವ್ ಮೊ:೮೪೯೫೯೫೮೦೨೦, ಜೆ.ಡಿ. ಪಟೇಲ್ ಮೊ: ೯೪೪೯೮೭೪೨೩೭, ಶ್ರೀದೇವಿ: ೯೯೦೧೦೬೪೧೬೭, ಕಿಶೋರಕುಮಾರ: ೯೩೫೩೨೯೪೦೯೪, ಬ್ರಹ್ಮಗಣೇಶ:೯೪೪೯೬೯೦೧೧೯ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಎನ್.ಶೇಖರಪ್ಪ, ರವಿ ದೋತರಬಂಡಿ, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.