ಆ.೬ ರಿಂದ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿ ಶ್ರಾವಣ ಸಂಭ್ರಮ ಆರಂಭ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೪: ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ನ ಎಲ್ಲಾ ಅಂಗಡಿಗಳಲ್ಲಿ ಆ.೬ ರಿಂದ ಆಗಸ್ಟ್ ೩೦ ರವರೆಗೆ ಶ್ರಾವಣ ಸಂಭ್ರಮ-೨೦೨೩ ಡಬಲ್ ಡಿಸ್ಕೌಂಟ್ ಅನ್ನು ನಮ್ಮ ಗ್ರಾಹಕರಿಗೆ ನೀಡಲಾಗುವುದು ಎಂದು ಬಿಎಸ್‌ಸಿ ಮಾಲೀಕರಾದ ಬಿ.ಸಿ. ಚಂದ್ರಶೇಖರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳನ್ನು ಬಿಎಸ್‌ಸಿ ಸಂಸ್ಥೆಯ ಹೊಸ ಬಟ್ಟೆಗಳೊಂದಿಗೆ ಸಂಭ್ರಮದಿAದ ಆಚರಿಸುವುದೇ ಶ್ರಾವಣ ಸಂಭ್ರಮವಾಗಿದೆ. ದಾವಣಗೆರೆಯ ಕಾಳಿಕಾದೇವಿ ರಸ್ತೆ, ಅಕ್ಕಮಹಾದೇವಿ ರಸ್ತೆ ಹಾಗೂ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ವಿಶೇಷ ರಿಯಾಯ್ತಿ ನೀಡಲಾಗುವುದು ಎಂದರು.ಸAಸ್ಥೆಯ ಮತ್ತೊಬ್ಬ ಮಾಲೀಕರಾದ ಬಿ.ಸಿ. ಶಿವಕುಮಾರ್ ಮಾತನಾಡಿ, ಹಬ್ಬಗಳ ನಿಮಿತ್ತ ನಮ್ಮ ಮಳಿಗೆಗಳಲ್ಲಿ ವಿವಿಧ ರೀತಿಯ ಸೀರೆಗಳು, ಹೊಸ ವಿನ್ಯಾಸದ ರೇಶ್ಮೆ ಸೀರೆಗಳು ಮತ್ತು ಪ್ರಖ್ಯಾತ ಮಿಲ್‌ಗಳ ಸೀರೆಗಳು, ಲೇಡೀಸ್ ವೇರ್, ಮೆನ್ಸ್ವೇರ್, ಮಕ್ಕಳ ರೆಡಿಮೇಡ್ ಹಾಗೂ ಇತರೆ ಎಲ್ಲಾ ಬಟ್ಟೆಗಳ ಮೇಲೆ ಮಾಮೂಲಿಯಂತೆ ನೀಡುವ ಶೇ, ೧೦ ರಿಯಾಯ್ತಿ ಜೊತೆಗೆ ಶೇ.೧೦ ವಿಶೇಷ ರಿಯಾಯಿತಿ ನೀಡಲಾಗುವುದು. ನಮ್ಮ ಈ ಬಾರಿಯ ಘೋಷವಾಕ್ಯ ‘ಬನ್ನಿ ನೋಡಿ, ಆನಂದಿಸಿ, ನಂತರ ಕೊಳ್ಳಿರಿ” ಎಂದಾಗಿದೆ. ಲಾಭಕ್ಕಿಂತ ಗ್ರಾಹಕರಿಗೆ ವಿಶೇಷ ಸೇವೆ ಒದಗಿಸುವುದೇ ನಮ್ಮ ಧ್ಯೇಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಬ್ಬಂದಿ ಉಮೇಶ್ ಹಾಜರಿದ್ದರು.