ಆ.೬: ರಾಯಚೂರು,ಯಾದಗಿರಿ ನೂತನ ಸಚಿವ, ಶಾಸಕರಿಗೆ ಸನ್ಮಾನ ಸಮಾರಂಭ

ರಾಯಚೂರು,ಆ.೩- ರಾಯಚೂರು,ಯಾದಗಿರಿ ಜಿಲ್ಲೆಗಳ ನೂತನ ಸಚಿವರು,ಶಾಸಕರ ಸನ್ಮಾನ ಸಮಾರಂಭ ಹಾಗೂ ಹಾಲುಮತ ನೌಕರರ ಸಮಾವೇಶವನ್ನು ಆಗಸ್ಟ್ ೬ ರಂದು ಶ್ರೀ ಕನಕ ಗುರುಪೀಠ, ತಿಂಥಣಿ ಬ್ರಿಜ್ ನಲ್ಲಿ ಬೆಳಿಗ್ಗೆ ೧೦- ೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ದಿನ್ನಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸಮಾವೇಶದ ದಿವ್ಯ ಸಾನಿಧ್ಯವನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಜ್ ಪ.ಪೂ. ಸಿದ್ದರಾಮಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಕೆ.ಕೆ.ವಿರುಪಾಕ್ಷಪ್ಪ, ಶಹಪೂರ ಮಾಜಿ ಶಾಸಕ ಅಮಾತೆಪ್ಪ ಕಂದಕೂರು ಅವರು ಆಗಮಿಸಲಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಗ್ರಾಮೀಣಭಿವೃದ್ದಿ ಇಲಾಖೆ ಜಂಟಿ ಕಾರ್ಯದರ್ಶಿ ಸಂಗಪ್ಪ ಕೆ.ಎ.ಎಸ್, ಸಂಗಪ್ಪ, ಗ್ರಾಮೀಣಭಿವೃದ್ದಿ ಇಲಾಖೆ ಸರ್ಕಾರ ಅಪರ ಕಾರ್ಯದರ್ಶಿ ಚಂದ್ರಶೇಖರ್ , ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಅಮರೇಶ ಇವರನ್ನು ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿ.ವೆಂಕಟೇಶ ಜಾಲಿಬೆಂಚಿ, ಬಸವರಾಜ, ಹಂಪಣ್ಣ ಭಂಡಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.