ಆ.೬ ಕ್ಕೆ ಸುನಂದ ದುರುಗೇಶ್ ನೆನಪು‌ ನಿರಂತರ ಕಾರ್ಯಕ್ರಮ

ದಾವಣಗೆರೆ.ಆ.೪: ನ್ಯಾಯವಾದಿಯಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿದ್ದ. ವಿಚಾರವಾದಿ-ಆಂದೋಲನಗಾರ್ತಿಯಾಗಿದ್ದ ಶ್ರೀಮತಿ ಸುನಂದ ದುರುಗೇಶ್ ಅವರ ‘ನೆನಪು ನಿರಂತರ’ ಕಾರ್ಯಕ್ರಮವನ್ನು ಆ.೬ ರಂದು ಬೆಳಿಗ್ಗೆ ೧೦.೩೦ ಕ್ಕೆ ಹದಡಿ ರಸ್ತೆಯಲ್ಲಿರುವ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಗೇಂದ್ರ ಬಂಡೀಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು, ಕವಿ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಮನಿತರ ದನಿಯಾಗಿ ಅನೇಕ ಆಂದೋಲನಗಳ  ಮೂಲಕ ಹೋರಾಟ ನಡೆಸಿದವರು ಸುನಂದಾ. ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಮಾಚಲ ಪ್ರದೇಶದ ವಿಶ್ರಾಂತ ಮುಖ್ಯ ನ್ಯಾಯಾಧೀಶರಾದ ಎನ್. ನಾರಾಯಣಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಮಾಜಿ  ಸಚಿವ ಹೆಚ್. ಆಂಜನೇಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಹೆಚ್. ಅರುಣ್ ಕುಮಾರ್ ಆಗಮಿಸಲಿದ್ದಾರೆ. ಚಿತ್ರದುರ್ಗದ ಪ್ರೊ. ಸಿ.ಕೆ. ಮಹೇಶ್ವರಪ್ಪ  ನವಯಾನ ಬುದ್ಧದಮ್ಮ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ವಕೀಲರಾದ ಕೆ.ಜಿ.ಕೆ. ಸ್ವಾಮಿ, ದುರುಗೇಶ್ ಗುಡಿಗೇರಿ, ಸುಧಾ, ಮಹಾವೀರ್ ಜೈನ್ ಸಾಂಘವಿ, ನಾಗೇಂದ್ರ ಹಾಗೂ ಹುಲಿಗೇಶ್ ಉಪಸ್ಥಿತರಿದ್ದರು.