
ರಾಯಚೂರು, ಆ.೪- ಹೊಸಮನಿ ಪ್ರಕಾಶನ ರಾಯಚೂರು ವತಿಯಿಂದ ಆಗಸ್ಟ್ ೬ ರಂದು ಬಶೀರ ಅಹ್ಮದ್ ಹೊಸಮನಿಯವರ ಅರ್ಜುನಾಯಣ ಕಥನ ಕಾವ್ಯ ಸಂಪುಟ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವೇಂದ್ರಮ್ಮ ಹೇಳಿದರು.
ಅವರಿಂದು ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸಮಾರಂಭವು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ಜರಗಲಿದೆ ಎಂದ ಅವರು,ಸಮಾರಂಭ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಲ್ಲುಂಡಿ ಮಾಡಲಿದ್ದಾರೆ. ಹಿರಿಯ ಸಾಹಿತಿ ವೀರಹನುಮಾನ ಅವರು
ಕೃತಿ ಬಿಡುಗಡೆ ಮಾಡಲಿದ್ದಾರೆ.ಕೃತಿ ಕುರಿತು ಯುವಕವಿ ವ್ಯಂಗ್ಯಚಿತ್ರಕಾರರು ಈರಣ್ಣ ಬೆಂಗಾಲಿ ಮಾತನಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಕೃತಿ ಕರ್ತೃ ಬಶೀರ ಅಹ್ಮದ ಹೊಸಮನಿ, ಹೊಸಮನಿ ಪ್ರಕಾಶನ ಪರ್ವಿನಬೇಗಂ ಹೊಸಮನಿ ಉಪಸ್ಥಿತಿ ಇರುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹೊಸಮನಿ ಲಿಯಾಖತ್ ಅಲಿ ಹೊಸಮನಿ ವಹಿಸಲಿದ್ದಾರೆ.ಮುಖ್ಯ ಅಥಿತಿಗಳಾಗಿ ಹಿರಿಯ ಸಾಹಿತಿ, ಬಾಗಲಕೋಟೆ ಪ್ರಾಂಶುಪಾಲ ಡಾ.ಮೈನುದ್ದೀನ ರೇವಡಿಗಾರ ,ಬಾಗಲಕೋಟೆ ಹಿರಿಯ ಸಾಹಿತಿ ಸಾಹಿತಿ ಡಾ.
ಪ್ರಕಾಶ ಖಾಡೆ, ರಾಯಚೂರಿನ ಹಿರಿಯ ಸಾಹಿತಿ ಆಯ್ಯಪ್ಪಯ್ಯ ಹುಡಾ ಅವರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಶೀರ್ ಅಹ್ಮದ್, ರಫೀಕ್ ಅಹ್ಮದ್, ಗೌಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.