ಆ.೫ ರಿಂದ ಕಾಚಿಗೂಡಾ ಯಶವಂತಪುರ ಹೊಸ ರೈಲು ಓಡಾಟ – ಬಾಬುರಾವ್

ರಾಯಚೂರು,ಆ.೬- ಸಕಲ ಸೌಲಭ್ಯಯುಳ್ಳ ಕಾಚಿಗೂಡಾ ಯಶವಂತಪುರ ಹೊಸ ರೈಲು ಅಗಸ್ಟ ೫ ರಿಂದಲೇ ಓಡಾಟ ಆರಂಭವಾಗಲಿದೆ ಎಂದು ರೈಲ್ವೆ ಬೋರ್ಡ ಸದಸ್ಯ ಬಾಬುರಾವ್ ತಿಳಿಸಿದ್ದಾರೆ.
ಕಾಚಿಗುಡ ರೈಲು ನಿಲ್ದಾಣದಿಂದ ರಾತ್ರಿ ೮.೨೫ ಕ್ಕೆ ಹೊರಟು ಬೆಳಿಗ್ಗೆ ೧೦-೩೦ ಕ್ಕೆ ಯಶವಂತಪುರಕ್ಕೆ ಬಂದು ಸೇರುತ್ತದೆ.
ಇದು ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಾಗಿದ್ದು,ಗುರುವಾರ ಮತ್ತು ಶುಕ್ರವಾರ ಮಾತ್ರ ಓಡಾಟ ನಡೆಸುತ್ತದೆ.
ಪ್ರತಿ ಶುಕ್ರವಾರದಂದು ಯಶವಂತಪುರ ದಿಂದ ಉಮದನಗರ, ಶಾದನಗರ, ಜಡಚರಲಾ, ಮಹೆಬೂಬುನಗರ, ವನಪರ್ತಿ ರಸ್ತೆ, ಗದ್ವಾಲ,ರಾಯಚೂರ,ಗುಂತಕಲ್, ಅನಂತಪುರ, ಧರ್ಮಾವರಂ, ಇಂದಪುರ ಮೂಲಕ ಯಶವಂತಪುರಗೆ ಬರುತ್ತದೆ.ಇದು ಎಲ್ಲ ವರ್ಗದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದರು.
ಬೇಡಿಕೆಗೆ ಸ್ಪಂದನೆ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ತಾಪಕ ಅರುಣ ಕುಮಾರ ಜೈನ್ ಹಾಗೂ ರಾಯಚೂರ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕಗೆ ರೈಲ್ವೆ ಧನ್ಯವಾದ ತಿಳಿಸಿದ್ದಾರೆ.