ಆ.೩ ರಂದು ಸಿದ್ದರಾಮೋತ್ಸವ: ಯಶಸ್ವಿಗೊಳಿಸಲು ಕೆ.ಅಂಜಿನಯ್ಯ ಮನವಿ

ರಾಯಚೂರು,ಜು.೨೬- ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ನವರ ೭೫ನೇ ಹುಟ್ಟು ಹಬ್ಬವನ್ನು ಆಗಸ್ಟ್ ೩ ರಂದು ದಾವಣಗೆರೆಯಲ್ಲಿ ನಡೆಯುತ್ತಿದೆ ಎಂದು ಶ್ರೀ ದಾಸ ಶ್ರೇಷ್ಠ ಕನಕದಾಸರ ಉದ್ಯಾನವನ ಸಮಿತಿ ಅಧ್ಯಕ್ಷ ಕೆ. ಅಂಜಿನಯ್ಯ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸಿದ್ದರಾಮಯ್ಯ ನವರ ೭೫ ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಗುತ್ತಿದೆ.i ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ನವರ ಅಭಿಮಾನಿಗಳು ಸ್ವಯಂ ಪ್ರೇರಿತದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.