ಆ.೩ ರಂದು ಎಲ್ ಬಿ ಕೆ ಟ್ರಸ್ಟ್ ನಿಂದ ಸಿಎಂ ಸಿದ್ದರಾಮಯ್ಯ ಜನ್ಮದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೯; ನಗರದ ಎಲ್ ಬಿಕೆ ಟ್ರಸ್ಟ್ ವತಿಯಿಂದ ‌ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೬ ನೇ ಜನ್ಮದಿನದ ಸಮಾರಂಭವನ್ನು ಆಗಸ್ಟ್ ೩ ರಂದು ಬೆಳಗ್ಗೆ ೧೧.೩೦ ಕ್ಕೆ ಹೊಂಡದ ವೃತ್ತದಲ್ಲಿರುವ ಶ್ರೀ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಎನ್.ಎಂ ಆಂಜನೇಯ ಗುರೂಜಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ನಡೆಯುವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ.ಟ್ರಸ್ಟ್‌ ಗೌರವಾಧ್ಯಕ್ಷ ಬಿ.ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್,ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್,ಮೇಯರ್ ವಿನಾಯಕ ಪೈಲ್ವಾನ್,ಕಾಂಗ್ರೆಸ್ ‌ಮುಖಂಡರಾದ ಎಂ.ಟಿ ಸುಭಾಷ್ ಚಂದ್ರ,ಎನ್.ಎಂ ಆಂಜನೇಯ ಗುರೂಜಿ,ಲಕ್ಷ್ಮೀದೇವಿ ವೀರಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.ಟ್ರಸ್ಟ್ ನಿಂದ ೫ ನೇ ಬಾರಿ ಸಿದ್ದರಾಮಯ್ಯ ಅವರ ಜನ್ಮದಿನ ಹಮ್ಮಿಕೊಂಡಿದ್ದೇವೆ.ಟ್ರಸ್ಟ್ ನಿಂದ ೫ ನೇ ಬಾರಿ ಸಿದ್ದರಾಮಯ್ಯ ಅವರ ಜನ್ಮದಿನ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಟ್ರಸ್ಟ್ ನಿಂದ ವಯೋವೃದ್ದರಿಗೆ, ಬಡವರಿಗೆ ಬ್ಲಾಂಕೆಟ್ ವಿತರಿಸಲಾಗುವುದು ನಂತರ ಅಂಧಮಕ್ಕಳು ಮತ್ತು ಅಂಗವಿಕಲ ಮಕ್ಕಳಿಗೆ ಹಣ್ಣು ಹಂಪಲು ಸಿಹಿ‌ವಿತರಣೆ ಮಾಡಲಾಗುವುದು ಹಾಗೂ ಜನ್ಮದಿನದ ಸಂಭ್ರಮಾಚರಣೆ ಬಳಿಕ ಅನ್ನಸಂತರ್ಪಣೆ‌ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಬಿ.ವೀರಣ್ಣ,ವಿ.ಪ್ರಮೋದ್ ಕುಮಾರ್,ಶ್ಯಾಗಲೆ ಮಂಜುನಾಥ್, ಎಸ್.ಕೆ ಸ್ವಾಮಿ,ಪರಶುರಾಮ್,ಚೇತನ್,ಆರ್‌.ಬಸಣ್ಣ ಉಪಸ್ಥಿತರಿದ್ದರು.