ಆ.೩ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ – ಎನ್.ಮಹಾವೀರ

ರಾಯಚೂರು, ಜು.೩೧- ನಗರವನ್ನು ಅಭಿವೃದ್ಧಿ ಗೊಳಿಸುವಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ನಗರಸಭೆ ಅಧ್ಯಕ್ಷ ಲಲಿತ ಕಡಗೊಳ್ ಅಂಜಿನಯ್ಯ ಸಂಪೂರ್ಣ ವಿಫಲವಾಗಿರುವುದನ್ನು ಖಂಡಿಸಿ ಆಗಸ್ಟ್ ೩ರಂದು ತರಕಾರಿ ಮಾರುಕಟ್ಟೆ ಬಂದ್ ಮಾಡಿ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ನಗರ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ ಹೇಳಿದರು
ಅವರಿಂದು ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯು ಉದ್ದೇಶಿಸಿ ಮಾತನಾಡಿ,
ನಗರಸಭೆ ಅದ್ಯಕ್ಷರು ಅಧಿಕಾರ ವಹಿಸಿಕೊಂಡಾಗ ನಿಂದ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕಾನೂನು ಅಡಿಯಲ್ಲಿ ಕೆಲಸ ನಿರ್ವಹಿಸಲು ಆಗದಿದ್ದಲ್ಲಿ ನೈತಿಕ ಹೊಣೆ ಹೊತ್ತು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಕಾಟ ಆಚಾರಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದುರು.
ಕಳೆದ ೧೧ತಿಂಗಳುಗಳಿಂದ ಎಂ.ಈರಣ ವೃತ್ತದಲ್ಲಿ ವಾರ್ಡಗಳಲ್ಲಿ ವ್ಯಾಪಾರ ಮಾಡುತ್ತಿರುವ ರೈತರನ್ನು ಹಾಗೂ ವ್ಯಾಪಾರಸ್ಪರನ್ನು ಉಸ್ಮಾನಿಯಾ ಹಾಗೂ ನಗರ ವಿವಿಧ ತರಕಾರಿ ಮಾರುಕಟ್ಟೆಗೆ ಸಳಾಂತರಿಸಿ ಎಂದು ಆನೇಕ ಬಾರಿ ಮನವಿ ಮಾಡಿದ್ದರು ನಗರ ಸಭೆ ಅಧ್ಯಕ್ಷರು ಹಾಗೂ ಪೌರಯುಕ್ತರು ನಿರ್ಲಕ್ಷ ವಹಿಸಿರುವುದು ಖಂಡನೀಯ.
ನಗರ ಸಭೆ ಪೌರಯುಕ್ತರು ತಾನು ಮಾಡುವ ಕೆಲಸ ಕಾನೂನು ಬಾಹಿರವಾಗಿದ್ದರೆ, ಸ್ವಯಂ ವರ್ಗಾವಣೆ ಮಾಡಿಕೊಂಡು ರಾಯಚೂರು ನಗರ ಸಭೆಯಿಂದ ನಿರ್ಗಮಿಸಲಿ.ಶಾಸಕರ ಮತ್ತು ನಗರ ಸಭೆ ಅಧ್ಯಕ್ಷರ ನಿರ್ಲಕ್ಷ ನಗರದ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿ, ಅಪಘಾತದ ರಸ್ತೆಗಳಾಗಿ ಮಾಪಟ್ಟಿವೆ. ಆಶೋಕ ಡಿಪೋದಿಂದ ಖಾಸಾಯಿ ಖಾನೆ ’ರಸ್ತೆ ಮುಖಾಂತರ ಹಾದು ಹೋಗುವ ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಬಲ್ಡ್ ರಸ್ತೆಯಿಂದ ಉಮಾ ಹೋಟೆಲ್ ಹೋಗುವ ರಸ್ತೆ, ಗೂಡ್ಸ್ ಶೆಡ್ ಹೋಗುವ ರಸ್ತೆ, ಆರವ್ ಮೋಹಳದಿಂದ ಯಾಸರೂರು: ರಸ್ತೆ ಹಾಗೂ ಆಶಾಪೂರು ಸರ್ಕಲ್‌ನಿಂದ ರಾಜಮಾತಾ ಗುಡಿ ಎದುರು ಆಫೀಸರ್ ಕಾಲೋನಿ ರಸ್ತೆ ಈ ಎಲ್ಲಾ ರಸ್ತೆಗಳು ತಗ್ಗು ಗುಂಡಿನಿಂದ ಕೂಡಿ ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳು ಸಂಭವಿಸುತ್ತಿವೆ.
ಈ ಹಿನ್ನಲೆಯಲ್ಲಿ ನಗರದ ಜನತೆ ಶಾಸಕರ ಮತ್ತು ನಗರ ಸಭೆ ಅಧ್ಯಕ್ಷರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿರುವುದು ಶೊಚನೀಯ. ನಗರದ ಬೀದಿ ದೀಪಗಳು ಹಾಗೂ ನಗರದ ಸ್ವಚ್ಛತೆಯ ಬಗ್ಗೆ ಕಾಳಜಿ ಇಲ್ಲದಿರುವ ಕಾರಣ ಆ.೦೩ ರಂದು ತರಕಾರಿ ಮಾರುಕಟ್ಟೆ ಬಂದ್, ಮಾಡಿ ನಗರ ಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ತರಕಾರಿ ಮಾರುಕಟ್ಟೆ ಕ್ಷೇಮಾಭಿವೃದ್ಧಿ ಸಂಘವು ನಿರ್ಧರಿಸಿದೆ ಎಂದರು.
ಈ ಸಂದರ್ಭದಲ್ಲಿ ಮಹಮ್ಮದ್ ಶಾಹಖಾನ್, ಪ್ರಭುನಾಯಕ್, ಬಸವರಾಜ್, ಕೆ.ವಿ ಖಾಜಪ್ಪ ಇದ್ದರು.