ಆ.೩೧ ರಿಂದ ಸೆ.೯ ರವರೆಗೆ ಅರ್ಯ ವೈಶ್ಯ ಗಣೇಶ ಉತ್ಸವ ಸಂಭ್ರಮ – ಸಾವಿತ್ರಿ ಶ್ರೀಹರ್ಷ

ರಾಯಚೂರು, ಆ.೨೯- ನಗರದ ಆರ್ಯವೈಶ್ಯ ಸಮುದಾಯದ ಸಂಕೇತವಾಗಿ ಕಳೆದ ೩೪ ವರ್ಷಗಳಿಂದ ಗೀತಾಮಂದಿರ ದಲ್ಲಿ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದ್ದು, ಆರ್ಯವೈಶ್ಯ ಗೀತಾಮಂದಿರ ಗಣೇಶ ಉತ್ಸವ ಸುಂದರ ಅಲಂಕಾರಗಳ ವೈಭವದಿಂದ ಅತ್ಯಂತ ಜನಪ್ರಿಯತೆ ಪಡೆದು ಕೊಂಡಿದೆ,ಈ ವರ್ಷ ೩೫ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು,ಈ ಸಲ ಮೂರುವರೆ ದಶಕಗಳ ಗಣೇಶ ಉತ್ಸವ ವಿಶೇಷ ಅಲಂಕಾರಗಳೊಂದಿಗೆ ೯ ದಿನಗಳ ಗಜಾನನ ಉತ್ಸವ ಹಮ್ಮಿಕೊಂಡಿದ್ದೇವೆ ಎಂದು ಆರ್ಯವೈಶ್ಯ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಸಾವಿತ್ರಿ ಶ್ರೀಹರ್ಷ ಹೇಳಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೩೫ ನೇ ವರ್ಷ ಆದ್ದರಿಂದ ಈ ಸಾರಿ ಗೀತಾಮಂದಿರ ಮಂದಿರ ಆವರಣದಲ್ಲಿನ ಅಲಂಕಾರ ಪ್ರತಿ ೩ ದಿನಗಳಿಗೊಮ್ಮೆ ಬದಲಾವಣೆ ಮಾಡುತ್ತೇವೆ. ದೇವಸ್ಥಾನಗಳ ಪ್ರತಿ ರೂಪದ ಚಿತ್ರಣ ನಿರ್ಮಿಸುತ್ತಿದ್ದೇವೆ ಅಲ್ಲದೆ ಅಲ್ಲಿ ಮೊಬೈಲ್ ಸೆಲ್ಫಿಯ ಅವಕಾಶ ಸಾರ್ವಜನಿಕರಿಗೆ ನೀಡುತ್ತೇವೆ. ಪ್ರತಿ ಅಲಂಕಾರವೂ ವಿಶೇಷವಾಗಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ ಎಂದು ವಿವರಿಸಿದರು.
ಮೊದಲ ದಿನ ಬೆಳಿಗ್ಗೆ ಗೀತಾಮಂದಿರದಿಂದ ಕಂಚಿ ಮೇಳದೊಂದಿಗೆ ತಂಡ ಶ್ರೀ ನಗರೇಶ್ವರ ದೇವಸ್ಥಾನಕ್ಕೆ ತೆರಳಿ ನಂತರ ಅಲ್ಲಿಂದ ಗಣೇಶ ಮೂರ್ತಿಯನ್ನು ಅಲಂಕೃತ ರಥದೊಂದಿಗೆ ಮೆರವಣಿಗೆ ಮೂಲಕ ಗೀತಾಮಂದಿರಕ್ಕೆ ತರಲಾಗುತ್ತದೆ. ನಂತರ ೯ ದಿನಗಳ ಉತ್ಸವಕ್ಕೆ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ,ಸಂಜೆ ೬ ಕ್ಕೆ ೯ ದಿನಗಳ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಸಾವಿತ್ರಿ ಶ್ರೀ ಹರ್ಷ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮುದಾಯದ ನಾಯಕರುಗಳಾದ ಕೊಂಡ ಕೃಷ್ಣಮೂರ್ತಿ, ಸಾವಿತ್ರಿ ಪುರುಷೋತ್ತಮ, ಕುಂಟ್ವಾಳ ವೆಂಕಟೇಶ, ಬಿ.ಗೋವಿಂದ ಗಾಣಧಾಳ ಲಕ್ಷ್ಮೀಪತಿ ರವರು ಆಗಮಿಸಲಿದ್ದಾರೆ ಎಂದರು.
ಪೂಜೆ, ಅಲಂಕಾರ ಮತ್ತು ಪ್ರಸಾದ ದಾನಿಗಳಿಗೆ ಅಂದಿನ ಸೇವೆಯೆಂದು ಗೌರವಿಸಲಾಗುತ್ತದೆ ೯ನೇ ದಿನ ಅಂದರ ೯ ಸೆಪ್ಟೆಂಬರ್ ಸಂಜೆ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ರಾಜಾ ಅಮರೇಶ್ವರ ನಾಯಕ ನಗರ ಶಾಸಕರಾದ ಶಿವರಾಜ ಪಾಟೀಲ ಆಗಮಿಸಲಿದ್ದಾರೆ, ಅರ್ಯವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಡೆಗೋಳ, ಆರ್ .ಡಿ. ಎ. ಅಧ್ಯಕ್ಷ ತಿಮ್ಮಪ್ಪ ನಾಡಗೌಡ ರವರು ಆಗಮಿಸಲಿದ್ದು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ನಂತರ ನಗರದ ಪ್ರಮುಖ ರಸ್ತೆಯಲ್ಲಿ’ ವಿಶೇಷ ಹೂಗಳ ಅಲಂಕೃತ ರಥೋತ್ಸವದಲ್ಲಿ ಗಣೇಶ ನ ಮೆರವಣಿಗೆ ಮಾಡಲಾಗುತ್ತದೆ ಈ ಮೆರವಣಿಗೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಂಜಾಬ್ ನಿಂದ ಕಲಾ ತಂಡಗಳು ಭಾಗವಿಸಿ ಆ ರಾಜ್ಯಗಳ ಸಾಂಸ್ಕೃತಿಕ ಸೊಬಗು ರಾಯಚೂರು ಜನತೆಗೆ ಉಣ ಬಡಿಸುತ್ತವೆ. ಜೊತೆಗೆ ವಿಭಿನ್ನ ರೀತಿಯ ಚಿತ್ತಾರಗಳನ್ನು ಮೂಡಿಸುವ ಬಾಣ ಬಿರುಸುಗಳು ಆಕಾಶದ ಅಂಗಳದಲ್ಲಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ೯ ದಿನಗಳ ಈ ವೈಭವದ ಉಸ್ತುವಾರಿ ಆರ್ಯವೈಶ್ಯ ಸಮುದಾಯದ ಯುವಕರ ತಂಡ ವಹಿಸಿಕೊಂಡಿದ್ದು ಉತ್ಸವದ ಪ್ರತಿ ಹೆಜ್ಜೆಯಲ್ಲೂ ಯುವಕರ ಕಾರ್ಯ ಪಡೆ ರಚನೆಯಾಗಿದ್ದು ಎಲ್ಲರೂ ಈಗಾಗಲೇ ಕಾರ್ಯಕ್ಕೆ ಸಜ್ಜಾಗಿರುತ್ತಾರೆ. ಜನಾಂಗದ ಸಹಾಯ ಸಹಕಾರದಿಂದ ಈ ಗಣೇಶ ಉತ್ಸವ ನಡೆಯಲಿದ್ದು ರಾಯಚೂರಿನ ಆರ್ಯವೈಶ್ಯರ ವಿಕ್ಷಕ ಗಣೇಶ ಉತ್ಸವ ಆಗಿರುತ್ತದೆ. ೩೫ ವರ್ಷಗಳ ಈ ಸಂಭ್ರಮವನ್ನು ಸಾರ್ವಜನಿಕರು ಬಂದು ದೇವರ ದರ್ಶನ ಪಡೆದು ವೈಭವದ ಸೊಬಗು ಸವಿಯಬೇಕು ಎಂದು ಮನವಿ ಮಾಡಿಕೊಂಡರು.ಗೌರವಾಧ್ಯಕ್ಷರಾದ ಕೊಂಡ ಹನುಮೇಶ, ಎಂ.ಆರ್.ಸತೀಶ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಶ್ರೀಕಾಂತ, ಕೋಶಾಧ್ಯಕ್ಷ ಬೂರ್ದಿಪಾಡ ರಾಘವೇಂದ್ರ ಇದ್ದರು.