ಆ.೩೦ರಂದು ಶರಣ ಹಡಪದ ಅಪ್ಪಣ್ಣನವರ ಮೂತಿ೯ ಪ್ರತಿಷ್ಟಾಪನೆ , ಧಮ೯ಸಭೆ 


ಸಂಜೆವಾಣಿ ವಾರ್ತೆ
ಕುಕನೂರು, ಅ.26:  ಶ್ರೀ ನಿಜ ಸುಖಿ ಶರಣ ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶರಣ ಹಡಪದ ಅಪ್ಪಣ್ಣ ನವರ ಮೂತಿ೯ ಪ್ರತಿಷ್ಟಾಪನೆ ಹಾಗೂ ಧಮ೯ಸಭೆ ಆ.೩೦ ಹಾಗೂ ೩೧ ರಂದು ಕುಕನೂರು ಪಟ್ಟಣದಲ್ಲಿ ಅದ್ದೂರಿ ಯಾಗಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಈರಣ್ಣ ಯಲಬುರ್ಗಾ ಹಾಗೂ ಗೌರವ ಅಧ್ಯಕ್ಷ ಶೇಖಪ್ಪ ಹಡಪದ ತಿಳಿಸಿದ್ದಾರೆ. ಅವರು ಶನಿವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಾಕ್ಟರ ಮಹಾದೇವ ಮಹಾಸ್ವಾಮಿಗಳು,ಯಲಬುರ್ಗಾ ದ ಶ್ರಿ ಬಸವ ಲಿಂಗೇಶ್ವರ ಶಿವಾಚಾರ್ಯ ಮಹಾಸ್ವಮಿಗಳು,ದದೆಗಲ್ ಕುಕನೂರಿನ ಸದ್ಗುರು ಆತ್ಮಾನಂದ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸುವರು,ಸುಕ್ಷೇತ್ರ ತಂಗಡಗಿಯ ಶ್ರಿ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಮಹಾ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ಬಸವರಾಜ್ ರಾಯರೆಡ್ಡಿ ಅಧ್ಯಕ್ಷತೆ ವಹಿಸುವರು. ಸಮಾಜದ ರಾಜ್ಯಾಧ್ಯಕ್ಷ ಸಿದ್ದಣ್ಣ ಮುಂಡಗೋಡ ಉದ್ಘಟಿಸಲಿದ್ದಾರೆ .ಸಂಸದ ಕರಡಿ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ ಅತಿಥಿ ಗಳಾಗೀ ಆಗಮಿಸಲಿದ್ದಾರೆ .ದ್ಯಾಂಪೂರ್ ಗ್ರಾಮದ ಸುಲೋಚನವ್ವ ವಿರೂಪಾಕ್ಷಪ್ಪ ಅಬ್ಬಿಗೇರಿ ಅವರು ಮೂತಿ೯ ಕೊಡುಗೈ ದಾನಿಗಳು ಆಗಿದ್ದಾರೆ.ಅವರಿಗೆ ಸಮಾಜ ವತಿಯಿಂದ ಸತ್ಕರಿಸಲಾಗುವುದು ಎಂದು ತಿಳಿಸಿದರು.  ಈ ವೇಳೆ ಸಮಾಜದ ಮುಖಂಡರಾದ ವಿರೂಪಾಕ್ಷಪ್ಪ ಅಬ್ಬಿಗೇರಿ,                 ಸಂತೋಷ ಕರುಗಲ್, ಶಿವಾನಂದಪ್ಪ ಹಡಪದ್,ದೇವಪ್ಪ ಕ.ಹಡಪದ್,ಆದಪ್ಪ ಶ.ಹಡಪದ್, ಶಂಕ್ರಪ್ಪ ಚ.ಹಡಪದ ಹಾಜರಿದ್ದರು.