ಆ.೨೬ ಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಸಮ್ಮೇಳನನೀರು ನೈರ್ಮಲ್ಯ ಕುರಿತು ಬೀದಿ ನಾಟಕ

ಸಂಜೆವಾಣಿ ವಾರ್ತೆ

ಹಿರಿಯೂರು : ಆ.22-ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಹಿರಿಯೂರು  ನಗರಸಭೆ ವತಿಯಿಂದ ಹಿರಿಯೂರಿನಲ್ಲಿ ಆಯೋಜಿಸಿದ್ದ ನೀರು ನೈರ್ಮಲ್ಯ ಜನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ವಾಣಿವಿಲಾಸ ಜಾನಪದ ಕಲಾತಂಡದ ವತಿಯಿಂದ ಬೀದಿ ನಾಟಕ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ ಆರ್ ಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅನೇಕ ಗಣ್ಯರು ಉಪಸ್ಥಿತರಿದ್ದರು. ವಾಣಿವಿಲಾಸ ಜಾನಪದ ಕಲಾತಂಡದ ನಾಯಕರಾದ ಎಚ್ ಎಸ್ ಮಾರುತೇಶ್, ಆಶಾ ಸುಮಲತಾ ಸಿದ್ದೇಶ್ ರಮೇಶ್ ಭಾಸ್ಕರ್ ಅಭಿಷೇಕ್ ಪಾಲ್ಗೊಂಡು ನೀರು ನೈರ್ಮಲ್ಯ ಕುರಿತು ಆಕರ್ಷಕವಾದ ಬೀದಿ ನಾಟಕ ನಡೆಸಿ ಜನ ಜಾಗೃತಿ ಮೂಡಿಸಿದರು