ಆ.೨೨, ಕೇಂದ್ರ ಸಚಿವರೊಂದಿಗೆ ಏಮ್ಸ್ ನಿಯೋಗ ಭೇಟಿ ನಿಗದಿ

ರಾಯಚೂರು,ಆ.೨೦- ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಕುರಿತಂತೆ ಇದೇ ತಿಂಗಳು ೨೨ರಂದು ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವರ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಆಶೋಕ ಕುಮಾರ್ ಜೈನ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕೇಂದ್ರ ಆರೋಗ್ಯ ಸಚಿವರು, ನಮ್ಮ ನಿಯೋಗವನ್ನು ಭೇಟಿ ಮಾಡಲು ಆಹ್ವಾನಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಈ ಕಾರಣದಿಂದ ಏಮ್ಸ್ ಹೋರಾಟ ಸಮಿತಿಯ ಬಸವರಾಜ ಕಳಸ ಹಾಗೂ ಆಶೋಕ ಕುಮಾರ್ ಜೈನ್ ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಅಂದು ನಿಯೋಗದ ಭೇಟಿಯಲ್ಲಿ ನಮ್ಮ ರಾಯಚೂರಿನಲ್ಲಿನ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಜಿಲ್ಲೆಗೆ ಏಮ್ಸ್ ಯಾಕೆ ಬೇಕು ಎಂಬ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿಯೇ ಏಮ್ಸ್ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಬರುವವರಿಗೆ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಜಾನ್ ವೆಸ್ಲಿ, ಎಸ್.ಎಸ್.ಪಾಟೀಲ್, ಎನ್.ಮಹಾವೀರ್,ಕಾಮರಾಜ್ ಪಾಟೀಲ್ ಇದ್ದರು.