ರಾಯಚೂರು,ಜು.೨೯- ಮುನ್ನೂರುಕಾಪು ಬಲಿಜ ಸಮಾಜ ಹಾಗೂ ಮುನ್ನೂರುಕಾಪು ಯೂತ್ ಸೇವಾ ಟ್ರಸ್ಟ್ ವತಿಯಿಂದ ಆಗಸ್ಟ್ ೧ ರಂದು ಉಚಿತ ಕಣ್ಣಿನ,ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ, ಕಣ್ಣಿನ ಶಸ್ತ್ರಚಿಕತ್ಸೆ ಮತ್ತು ಲೆನ್ಸ್ ಜೋಡಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ವೆಂಕಟೇಶ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಶ್ರೀ ವೀರಾಂಜನೇಯ ಮುನ್ನೂರುಕಾಪು ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೯-೩೦ ರಿಂದ ಸಂಜೆ ೪-೩೦ ರವರೆಗೆ ಶಿಬಿರ ನಡೆಯಲಿದೆ ಎಂದರು.
ಈ ಶಿಬಿರದಲ್ಲಿ ಸಮೀಪ ಮತ್ತು ದೂರ ದೃಷ್ಟಿ ದೊಳವುಳ್ಳವರು. ಮೋತಿ ಬಿಂದು ಕಾಚುಬಿಂದು. ಕಣ್ಣೀರು ಸೋರುವುದು,ಕಣ್ಣು ಕೆಂಪಾಗುವುದು.ಕಣ್ಣಿನ ಶಸ್ತ್ರ ಚಿಕಿತ್ಸೆ ಮಾರ್ಗದರ್ಶನ ಮತ್ತು ಶಸ್ತ್ರ ಚಿಕಿತ್ಸೆ ಮಾಡಲಾಗುವುದು.ಗ್ಯಾಸ್ ಸ್ಟ್ರೋ ಸಮಸ್ಯೆಯನ್ನು ಕೂಡ ಶಿಬಿರದಲ್ಲಿ ನೀಡಲಾಗುತ್ತದೆ ಎಂದ ಅವರು,ಶಿಬಿರದಲ್ಲಿ ರಿಮ್ಸ್ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಮೇಶ ಸಿ.ಸಾಗರ, ಡಾ. ಕರಿಷ್ಮ ಮುನೋಲಿ, ಡಾ. ಅನೀಲ್ ಕುಮಾರ ಗಾರಲದಿನ್ನಿ ಸೇರಿದಂತೆ ವಿವಿಧ ವೈದ್ಯರು ಆಗಮಿಸಲಿದ್ದಾರೆ ಆದ್ದರಿಂದ ನಗರದ ನಿವಾಸಿಗಳು ಈ ಶಿಬಿರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಬರೀಷ ರೆಡ್ಡಿ, ನಾಗರಾಜ, ಎನ್.ಗಣೇಶ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.