ಆ.೧೫: ಸಂಗೀತೋತ್ಸವ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ

ರಾಯಚೂರು, ಆ.೧೩- ಆ.೧೫ ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಲಾ ಸಂಕುಲ ಸಂಸ್ಥೆ ವತಿಯಿಂದ ಸಂಗೀತೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕಲಾ ಸಂಕುಲ ಸಂಸ್ಥೆ ಕಾರ್ಯದರ್ಶಿ ಮಾರುತಿ ಬಡಿಗೇರ್ ಅವರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ ೫ ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಉಡುಪಿ ಕಲಾವತಿಯವರಿಂದ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹತ್ತು ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕರಾವಳಿ ಕನ್ನಡದ ಕೋಗಿಲೆ ಕಲಾವತಿ ಉಡುಪಿಯವರಿಂದ ಹಾಗೂ ಸ್ಥಳೀಯ ಕಲಾವಿದರಿಂದ ದೇಶಭಕ್ತಿ ಗೀತೆ ಭಾವಗೀತೆ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಎನ್ ಉದಯಕುಮಾರ ಸಿರವಾರ ಇವರಿಗೆ ಬಸವ ಪುರಸ್ಕಾರ, ಮಹೇಶ ತಡಬಡಿ ಯಾದಗಿರಿ ಇವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ, ದೇವಸುಗೂರಿನ ಮಾನಸ ವೀಣಾ ಇವರಿಗೆ ಉತ್ತಮ ಅಧಿಕಾರಿ ಪ್ರಶಸ್ತಿ, ತಿರುಮಲರೆಡ್ಡಿ ವಡ್ಡೆಪಲ್ಲಿ ಇವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿಗೆ ಸುರೇಂದ್ರ ಕುಮಾರ ವಿಜಯನಗರ ಹಾಗೂ ಗಾನ ಕೋಗಿಲೆ ಪ್ರಶಸ್ತಿಗೆ ಚಿರಂಜೀವಿ ಯಾದವ್ ಆಯ್ಕೆ ಮಾಡಲಾಗಿದೆ ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಡಾ.ರಹೆಮತ್ ಕಂಚಗಾರ ಅವರು ನೆರವೇರಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪುತ್ತೇದಾರ, ಡಿವೈಎಸ್ ಪಿ ದತ್ತಾತ್ರೇಯ ಕರ್ನಾಡ್, ಡಾ. ಬಸವನಗೌಡ ಪಾಟೀಲ್, ಡಾ. ತಾನಾಜಿ ಕಲ್ಯಾಣಕರ್, ಹಾಗೂ ರವೀಂದ್ರ ಜಲ್ದಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೇಖಾ ಬಡಿಗೇರ್, ಅಮರೇಗೌಡ, ಬಸನಗೌಡ ಗಿರೆಡ್ಡಿ, ಮೌನೇಶ ವಡವಟ್ಟಿ ಇದ್ದರು.