ಆ.೧೪: ಗದ್ದಾರ್ ಕವಿಗೆ ನುಡಿನಮನ, ಕುಟುಂಬ ಭಾಗಿ

ರಾಯಚೂರು,ಆ.೧೦- ಶೋಷಿತ ಜನಾಂಗದ ಪರವಾಗಿ ವ್ಯವಸ್ಥೆಗೆ ಸೆಡ್ಡು ಹೊಡೆದು ಜನಮಾನಸದಲ್ಲಿ ಗದ್ದಾರ್ ಆಗಿ ಕಂಗೊಳಿಸಿದ ಕ್ರಾಂತಿಕಾರಿ ಜನಪದ ಹಾಗೂ ಹೋರಾಟ ಗೀತೆಗಳ ನಾಯಕ, ಗಾಯಕ ಗುಮ್ಮಡಿ ವಿಠ್ಠಲರಾವ್ ಅವರ ನಿಧನದಿಂದ ಸಾಂಸ್ಕೃತಿಕ ಲೋಕದರ?ವತವೇ ಕುಸಿದಂತಾಗಿದ್ದು ಅಂತಹ ಮಹಾನ್ ಸಂಘರ್ಷ ಜೀವನದ ಹಿರಿಯ ಚೇತನನಿಗೆ ಆ.೧೪ ರಂದು ಏಮ್ಸ್ ಹೋರಾಟ ರಣಾಂಗಣದಲ್ಲಿ ಸಂಜೆ ೫ ಗಂಟೆಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರ ಅಂಬಣ್ಣ ಆರೋಲಿಕರ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮನೆಬಾಗಿಲಿಗೆ ಬಂದ ಸರಕಾರಿ ನೌಕರಿಯನ್ನು ಬಿಟ್ಟು ಶೋಷಿತರ ಪರವಾಗಿ ವಿಭಿನ್ನ ರೀತಿಯಲ್ಲಿ ಹೋರಾಟವನ್ನು ಸಂಘಟಿಸಿ ತಮ್ಮದೇ ಅಭಿಮಾನಬಳಗವನ್ನು ಸಂಪಾದಿಸಿದ್ದಲ್ಲದೆ ವ್ಯವಸ್ಥೆಯ ವಿರುದ್ದ ಸೆಟೆದುನಿಂತ ಅವರ ಕಾರ್ಯವೈಖರಿ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಅಂತಹ ಮಹನೀಯರಿಗೆ ನುಡಿ-ನಮನವನ್ನು ರಾಯಚೂರು ನಗರದ ಗಾಂಧೀ ಪುತ್ಥಳಿ ಬಳಿ ಹಮ್ಮಿಕೊಂಡಿರುವ ಏಮ್ಸ್ ಹೋರಾಟ ರಣಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಖ್ಯಾತ ನಾಮಧೇಯರು, ಹಾಗೂ ತೆಲಂಗಾಣದಿಂದ ಗದ್ದಾರ ಅವರ ಕುಟುಂಬಸ್ಥರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಲ್ಲೆ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಆಗಮಿಸಲಿದ್ದಾರೆ. ಗದ್ದಾರ ಅವರ ಹಿತೈಷಿಗಳು, ಅವರನ್ನು ಇಷ್ಟಪಡುವವರು, ಅಭಿಮಾನಿಗಳು ಹಾಗೂ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಈ ಸಂದರ್ಭದಲ್ಲಿ ಆಬ್ರಹಾಂ ಹೊನ್ನಟಗಿ, ಜಯಪ್ಪ ಅನಿಲಕುಮಾರ ಕೆ.ಪಿ, ನರಸಿಂಹಲು, ವಿರೇಶ ಸೇರಿದಂತೆ ಇತರರು ಇದ್ದರು.