ಆ.೧೨ ಸರ್ಕಾರದಿಂದ ನೂಲಿ ಚಂದಯ್ಯ ಜಯಂತಿ-ರಾಮಕೃಷ್ಣ

ಸಿಂಧನೂರು.ಆ.೦೫- ನೂಲಿ ಚಂದಯ್ಯ ಜಯಂತಿಯನ್ನು ಆ.೧೨ ರಂದು ಆಚರಣೆ ಮಾಡಲು ಸರ್ಕಾರ ಆದೇಶ ಮಾಡಿದ್ದಕ್ಕೆ ತಾಲೂಕಾ ಕುಳವ ಮಾಹಾ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಕುಳವ ಮಹಾ ಸಂಘದ ತಾಲೂಕಾ ಅಧ್ಯಕ್ಷರಾದ ರಾಮಕೃಷ್ಣ ಭಜಂತ್ರಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ. ಆರ್ಥಿಕ. ಶೈಕ್ಷಣಿಕ ರಾಜಕೀಯವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಇಲ್ಲಿ ತನಕ ಆಡಳಿತ ನಡೆಸಿದ ಸರ್ಕಾರಗಳು ಸೂಕ್ತ ಸ್ಥಾನಮಾನ ನೀಡಿರಲಿಲ್ಲ ತಡವಾಗಿಯಾದರು ಬಿಜೆಪಿಯ ಸರ್ಕಾರ ನೂಲಿ ಚಂದಯ್ಯಜಯಂತಿಯನ್ನು ಸರ್ಕಾರ ದಿಂದ ಆಚರಣೆ ಮಾಡಲು ಆದೇಶ ಮಾಡಿರುವುದು ಸಮಾಜಕ್ಕೆ ನ್ಯಾಯ ಒದಗಿಸಿದ್ದು ಸಂತೋಷ ವಾಗಿದೆ ಎಂದರು
ಆ.೧೨ ರಂದು ಮುಂಜಾನೆ ನಗರದ ಕೊರವರ ಓಣಿಯಿಂದ ಮಹಿಳೆಯರಿಂದ ಕಳಸ ಕುಂಬಗಳೊಂದಿಗೆ ನೂಲಿ ಚಂದಯ್ಯ ನವರ ಭಾವಚಿತ್ರದ ಭವ್ಯ ಮರವಣೆಗೆಯನ್ನು ನಗರದಲ್ಲಿ ಮಾಡಿ ನಂತರ ಶ್ರೀಶಕ್ತಿ ಭವನದಲ್ಲಿ ಬಹಿರಂಗ ಸಮಾರಂಭ ನಡೆಯಲಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಿ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಾಮಕೃಷ್ಣ ಭಜಂತ್ರಿ ಸಮಾಜದ ಬಾಂದವರಲ್ಲಿ ಮನವಿ ಮಾಡಿಕೊಂಡರು.
ಹನುಮಂತ ಕಾರಲಕುಂಟಿ ಕೆ.ಎಸ್.ಮರಿಯಪ್ಪ, ತುರಡಗಿ ಮರಿಯಪ್ಪ, ಬಳ್ಳಾರಪ್ಪ ಹೋಗರನಾಳ, ಹುಲಗಪ್ಪ, ಹನುಮಂತ, ಹನುಮಂತ ಕುರಿ, ತಿಮ್ಮಣ್ಣ, ಹನುಮಂತಪ್ಪ ಭಜಂತ್ರಿ ವಿರೇಶ ಸೇರಿದಂತೆ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.