ಆ.೧೨ ರಂದು ಗಾಳಿಪಟ-೨ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ದಾವಣಗೆರೆ.ಜು.೧೮: ಭಾವನಾತ್ಮಕ, ವಿನೋದ, ಪ್ರೇಮ ಕಥೆಯ ಹಂದರ ಹೊಂದಿರುವ ಗಾಳಿಪಟ 2 ಚಲನಚಿತ್ರ ಮುಂಬರುವ ಆ. 12ರಂದು ರಾಜಾದ್ಯಂತ ತೆರೆ ಕಾಣಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ಕಲಾವಿದರು, ಗಣೇಶ್, ದಿಗಂತ್ ಹಾಗೂ ಭೂಷಣ್  ಎನ್ನುವ ಮೂವರು ಪ್ರಾಣ ಸ್ನೇಹಿತರ ನಡುವೆ ನಡೆಯುವ ಕಥೆಯ ಆಧಾರದಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಮೂವರು ಪ್ರಾಣ ಸ್ನೇಹಿತರು ನೀರು ಕೋಟೆ ಎನ್ನುವ ಊರಿನ ಕನ್ನಡ ಶಾಲೆಯಲ್ಲಿ ಓದಿರುತ್ತಾರೆ. ಅಲ್ಲಿಗೆ ಹೋದ ವೇಳೆ ಈ ಮೂವರು ಗೆಳೆಯರು ತಮ್ಮ ಹಳೆಯ ಕಿಶೋರ್ ಕುಮಾರ್ ಅವರನ್ನು ಭೇಟಿ ಮಾಡುತ್ತಾರೆ.ಈ ವೇಳೆ ಶಿಕ್ಷಕರ ವೈಯಕ್ತಿಕ ಕಾರಣದಿಂದಾಗಿ ಮೂವರು ಸ್ನೇಹಿತರು ಒಂದೇ ಕೋಣೆಯಲ್ಲಿ ಉಳಿಯುತ್ತಾರೆ. ಹಲವು ವರ್ಷಗಳ ನಂತರ ಮತ್ತೆ ಸ್ನೇಹಿತರು ಸೇರಿ ತಮ್ಮ ಗುರುಗಳಿಗೆ ಸಹಾಯ ಮಾಡಲು ಒಂದಾಗುವ ಸಮಯಕ್ಕೆ ಸರಿಯಾಗಿ ಅವರವರ ಬದುಕುಗಳ ಪ್ರೇಮ ಸಂಬಂಧಗಳನ್ನು ಸರಿ ಮಾಡಿ ಕೊಳ್ಳುವ ಅವಕಾಶ ಸಿಗುತ್ತದೆ ಎಂದು ಮಾಹಿತಿ ನೀಡಿದರು.ಇಂತಹ ಕೋಚಕ ತಿರುವುಗಳ ಜತೆ ನಕ್ಕು ನಗಿಸುವ ಪ್ರಸಂಗಗಳ ಪ್ರೇಮ ಕಥೆಯೇ ಗಾಳಿಪಟ 2 ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಇದ್ದರು.