ಆ.೦೭ : ಛಲುವಾದಿ ಮಹಾಸಭಾ ಚುನಾವಣೆ

ರಾಯಚೂರು.ಜು.೨೮- ಛಲುವಾದಿ ಮಹಾಸಭಾ ಚುನಾವಣೆ ಆಗಸ್ಟ್ ೦೭ ರಂದು ನಡೆಯಲಿದ್ದು, ಜು.೩೦ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆಂದು ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕಾರಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ನಿರ್ದೇಶಕರ ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲು ನಾಮಪತ್ರ ಸಲ್ಲಿಸಲು ಅವಕಾಶಗಳಿವೆ. ಇಂದಿನಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಜು.೩೦ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಆ.೦೭ ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ೪೪೫ ಸದಸ್ಯರಿದ್ದಾರೆ. ರಾಜ್ಯ ಛಲುವಾದಿ ಮಹಾಸಭೆಯ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಶ್ವನಾಥ ಪಟ್ಟಿ, ಲಕ್ಷ್ಮಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.