ಆ.೦೧ : ರಾಷ್ಟ್ರೀಯ ಬಾಯಿ ನೈರ್ಮಲ್ಯ ದಿನಾಚರಣೆ

ರಾಯಚೂರು.ಜು.೨೮- ರಾಷ್ಟ್ರೀಯ ಬಾಯಿ ನೈರ್ಮಲ್ಯ ದಿನಾಚರಣೆಯೂ ಆಗಸ್ಟ್ ೦೧ ರಂದು ಭಾರತಾದ್ಯಂತ ನಡೆಯಲಿದ್ದು, ಇದರ ಅಂಗವಾಗಿ ನಗರದ ಬಸ್ ನಿಲ್ದಾಣದಲ್ಲಿ ಎಎಂಇ ದಂತ ವೈದ್ಯಕೀಯ ಆಸ್ಪತ್ರೆಯಿಂದ ಕಾರ್ಯಕ್ರಮ ನಡೆಸಲಾಗುತ್ತದೆಂದು ಡಾ.ಶಿವಾನಂದ ಆಸ್ಪಳ್ಳಿ ಅವರು ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತೀಯ ಪೆರಿಯೋಡೋಂಟಿಕ್ಸನ ವರಿಷ್ಠ ಹಾಗೂ ಇಂಡಿಯನ್ ಸೊಸೈಟಿ ಆಫ್ ಪೆರಿಯೋಡೋಂಟಿಕ್ಸನ ಸಂಸ್ಥಾಪಕರಾಗಿದ್ದ ಡಾ.ಜಿ.ಬಿ. ಶಾಂಕ್ವಾಲ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಆಗಸ್ಟ್ ೦೧ ರಂದು ಬಾಯಿ ನೈರ್ಮಲ್ಯ ದಿನವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ. ವಿವಿಧ ಶಿಬಿರಗಳನ್ನು ಆಯೋಜಿಸಿ, ಉಚಿತ ಬಾಯಿ ನೈರ್ಮಲ್ಯ ಕಿಟ್ ವಿತರಿಸಲಾಗುತ್ತದೆ.
ಎಎಂಇ ದಂತ ವೈದ್ಯಕೀಯ ಆಸ್ಪತ್ರೆಯಿಂದ ಬಸ್ ನಿಲ್ದಾಣದಲ್ಲಿ ಮುಂಜಾನೆ ೧೦ ಘಂಟೆಯಿಂದ ೧ ಘಂಟೆವರೆಗೆ ಬಾಯಿ ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಬಾಯಿ ಕಾಯಿಲೆಗಳಿಗೆ ನಿರ್ಲಕ್ಷ್ಯಯೆ ಕಾರಣೆವೆಂದು ಹೇಳಿದರು. ಬಾಯಿ ನೈರ್ಮಲ್ಯ ಬಗ್ಗೆ ಜಾಗೃತಿ ಅಗತ್ಯವೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ರಮೇಶ, ಡಾ.ನಾಗಪ್ಪ ಉಪಸ್ಥಿತರಿದ್ದರು.