ಆ ನೋವು ಯಾರಿಗೂ ಬೇಡ…

ಸಾಮಾಜಿಕ ಕಳಕಳಿ ಮತ್ತು ಯುವ ಜನರಲ್ಲಿ ಜಾಗೃತಿ ಮೂಡಿಸುವ ವಿಭಿನ್ನ ಪಾತ್ರದಲ್ಲಿ ಹಿರಿಯ ಕಲಾವಿದ ಎಂ.ಕೆ ಮಠ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಠ ಅವರ ವೈವಿಧ್ಯಮಯ‌ಪಾತ್ರಗಳ ಖಾತೆಗೆ ಮತ್ತೊಂದು ಸೇರ್ಪಡೆಯಾಗಿದೆ ಅದುವೇ “

” ಆ ನೋವು ” ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸಹಾಯಕರಾಗಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ” ಆ ನೋವು” ಕಿರುಚಿತ್ರದ ಮೂಲಕ ಜನರ ಮುಂದೆ ಕಟ್ಟಿಕೊಡಲು ನಿರ್ದೇಶಕ ಶಂಕರ್ ಜಿ . ಮುಂದಾಗಿದ್ದಾರೆ.

ಬೆಂಗಳೂರು, ಶ್ರೀರಂಗಪಟ್ಟಣ, ಕೆಜಿಎಫ್,ಕೋಲಾರದ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.ಇದರಲ್ಲಿ ಎಂ.ಕೆ ಮಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಕಾಶ್ ಮತ್ತು ಜ್ಯೋತಿ ಮತ್ತಿತರಿದ್ದಾರೆ.

ಸನ್ನಿವೇಶವೊಂದರಲ್ಲಿ ಅಭಿನಯಿಸುವಾಗ ಕಣ್ಣಲ್ಲಿ ನೀರು ಬಂತು.ಅಂತಹ ಪಾತ್ರ ಅದು.‌ಜನರ ಮನಸ್ಸಿಗೆ ನಾಟುತ್ತದೆ ಎಂದರು ಕಲಾವಿದ ಎಂ.ಕೆ ಮಠ.

ಮಾಹಿತಿ ನೀಡಿದ ನಿರ್ದೇಶಕ ಶಂಕರ್, ಹುಡುಗಿ ಕೈ ಕೊಟ್ಟಳೆಂದು ಜೀವ ಮತ್ತು ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದ ಹುಡುಗ ಮತ್ತು ಮಗನನ್ನು ಕಳೆದುಕೊಂಡ ತಂದೆ ನಡುವೆ ನಡೆಯುವ ಸಂಭಾಷಣೆ ” ಆ ನೋವು” ತಿರುಳು ಎಂದು ಹೇಳಿದರು.

ಹುಡುಗಿ ಇಲ್ಲವೆಂದಮೇಲೆ ,ತಂದೆ ತಾಯಿ ಸೇರಿದಂತೆ ನನಗೆ ಏನು ಬೇಡ ಎಂದು ನಿರ್ಧರಿಸಿರುವ ಹುಡುಗ ಹಿರಿಯ ಜೀವ ಮಾಡುವ ಕೆಲಸ ಕಂಡು ಅವನಿಗೆ ಅರಿವಿಲ್ಲದೆ‌ ಮನಸ್ಸು ಕರಗಿ ತನಗರಿವಿಲ್ಲದೇ ಬದಲಾಗುವ ಪಾತ್ರವನ್ನು ಹೊಂದಿದೆ ಹೊಂದಿದೆ ಎಂದರು.

ಮಗನನ್ನು ಕಳೆದುಕೊಂಡ ನೋವು ಅನುಭವಿಸುತ್ತಿದ್ದೇನೆ.ಅಂತಹ ನೋವು ನಿಮ್ಮ ತಂದೆ ತಾಯಿಗೆ ಕೊಡಬೇಡ ಎನ್ನುವ ತಿರುಳು ಹೊಂದಿದೆ.ಚಿತ್ರೀಕರಣ ಮುಗಿದಿದ್ದು ಸಣ್ಣ ಪುಟ್ಟ ಕೆಲಸ ಮಾತ್ರ ಬಾಕಿ ಇದೆ ಎಂದು ವಿವರ ಹಂಚಿಕೊಂಡರು. ವಿಶ್ವಾಸ್ ಆರ್ ಕ್ಯಾಮರಾ ಹಿಂದೆ ಕೆಲಸ ಮಾಡಿದ್ದಾರೆ.ನಿರ್ದೇಶಕರೇ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ

ಕಣ್ಣಲ್ಲಿ‌ ನೀರು ಬಂತು

ಸೀನಲ್ಲಿ ಅಳೂನೆ ಬಂದ್ಬಿಡ್ತು.ಹೀರೋ ಜೊತೆ ನನ್ಮಗ ಹೆಂಗ್ ಸತ್ತೋದ ಅನ್ನೋದನ್ನ ಹೇಳ್ಬೇಕು. ಹೇಳ್ತಾ ಹೇಳಾತ್ತಾ ನಿಜವಾಗ್ಲೂ ಕಣ್ಣೀರು ಬಂದ್ಬಿಡ್ತು-ಬಿಕ್ಕಳಿಕೆ ಪ್ರಾರಂಭ ಆಯ್ತು ಆ ದೃಶ್ಯಕ್ಕೆ ಅದು ಬೇಕಾಗಿತ್ತು

– ಎಂ.ಕೆ ಮಠ