ಆ೧೦ ಶಿಕ್ಷಣ,ಸಂವಿಧಾನ,ಭಾರತ ಉಳಿಸಿ ಜಾಥಾ ನಗರಕ್ಕೆ ಆಗಮನ – ಅಮರೇಶ ಕಡಗದ

ರಾಯಚೂರು,ಆ.೫- ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ ವಿರೋಧಿ ನೀತಿಯನ್ನು ಖಂಡಿಸಿ ಶಿಕ್ಷಣ ಉಳಿಸಿ,ಸಂವಿಧಾನ ಉಳಿಸಿ,ಭಾರತ ಉಳಿಸಿ ಎಂಬ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್. ಎಫ್ ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಜಾಥವು ಕನ್ಯಾಕುಮಾರಿ ಯಿಂದ ಹೊರಟ ಜಾಥವು ತಮಿಳುನಾಡು,ಆಂದ್ರಪ್ರದೇಶ,ತೆಲಂಗಾಣದ ಮೂಲಕ ಅಗಷ್ಟು ೧೦ ರಂದು ರಾಯಚೂರಿಗೆ ಬರಲಿದೆ.ಅಂದು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದ ಏಮ್ಸ್ ಹೋರಾಟ ಧರಣಿಗೆ ವರೆಗೆ ಮೆರವಣಿಗೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತದೆ ಎಂದರು.
ದೇಶದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ.ಬಿಜೆಪಿ ನೇತೃತ್ವ ಕೇಂದ್ರವಾಗಿ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿ ನಿರ್ಲಕ್ಷ್ಯ ದಿಂದ ಸಾಕಷ್ಟು ತೊಂದರೆ ಆಗುತ್ತಿದೆ.ಹಾಗೂ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿದರು
ರಾಜ್ಯ ಸರಕಾರ ಸರಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಕೊರತೆ ನಪದ ವಿಲೀನದ ಹೆಸರಿನಲ್ಲಿ ಸುಮಾರು ೧೩,೮೦೦ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವು ಖಂಡನೀಯ.ರಾಜ್ಯದಲ್ಲಿ ಬಹುತೇಕ ಬಡ,ದಲಿತ ,ಹಿಂದುಳಿದ ವರ್ಗ , ಅಲ್ಪಸಂಖ್ಯಾತ ಮತ್ತು ನಗರದ ಸ್ಲಂ ನಿವಾಸಿಗಳ ಮಕ್ಕಳು ತಮ್ಮ ಶಿಕ್ಷಣವನ್ನು ಸರ್ಕಾರಿ ಶಾಲೆಗಳ ಮೇಲೆ ಅವಲಂಬನ ಆಗಿದ್ದಾರೆ ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಲು ಹೊರಟಿರಿವುದು ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿಯಾಗಿದೆ ಇದನ್ನು ಕೂಡಲೇ ಕೈ ಬಿಡಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಮ್ಯಾಗಳ ಮನಿ,ಭೀಮನಗೌಡ,ಚಿದಾನಂದ ಕರಿಗೂಲಿ,ರಮೇಶ್ ವೀರಾಪುರ ಇದ್ದರು.