ಆಹೇರಿ ಎಲ್.ಟಿ.ನಂ.01 ರಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ

ವಿಜಯಪುರ, ಸೆ.13-ತಾಲೂಕಿನ ಆಹೇರಿ ಎಲ್.ಟಿ.ನಂ.01 ರಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಎಂ.ಪಿ.ಎಸ್ ಆಹೇರಿ ಎಲ.ಟಿ. ನಂ 1ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ಸಂಜಯ್ ಮಹಾರಾಜರು ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ವ ಸಿದ್ದರಾಮೇಶ್ವರ ಮಠ ಆಹೇರಿ ಎಲ್.ಟಿ1 ವಹಿಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಪ್ರತಿಭಾ ಕಾರಂಜಿ ಬಹಳ ಅನೂಕೂಲವಾಗುತ್ತದೆ ಎಂದು ಹೇಳಿ ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುನೀಲ ರೂಪಸಿಂಗ್ ಜಾಧವ ಅಧ್ಯಕ್ಷರು ಎಸ್.ಡಿ.ಎಂ.ಸಿ ಎಂ.ಪಿ.ಎಸ್ ಆಹೇರಿ ಎಲ್.ಟಿ.ನಂ1 ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ರವೀಂದ್ರ ಚಿಕ್ಕಮಠ ಶಿಕ್ಷಣ ಸಂಯೋಜಕರು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸೂಪ್ತಪ್ರತಿಭೆಯನ್ನು ಹೊರಗೆಡವಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಇಂತಹ ವೇದಿಕೆಯನ್ನು ಹೆಚ್ಚು- ಹೆಚ್ಚು ಮಕ್ಕಳು ಬಳಸಿಕೊಂಡು ಅವರ ಭವಿಷ್ಯವನ್ನು ಉಜ್ವಲವನ್ನಾಗಿಸಿಕೊಳ್ಳಲಿ ಎಂದರು.
ಮುಖ್ಯ ಅತಿಥಿಗಳಾಗಿ ರಾಜಪಾಲ ಶಂಕರ್ ಜಾಧವ, ನಿರ್ಮಲಾ ರಾಜಪಾಲ ಜಾಧವ, ಶ್ರೀಮತಿ ಸೋನಾಭಾಯಿ ಜಾಧವ, ರವೀಂದ್ರ ಚಿಕ್ಕಮಠ ಶಿಕ್ಷಣ ಸಂಯೋಜಕರು, ಶ್ರೀ ಶ್ರೀಕಾಂತ ಬಿ.ಎಂ, ಸಿ.ಆರ್.ಪಿ.ಗಳು ಆಹೇರಿ, ರಾಜು ರಾಠೋಡ ಸಿ.ಆರ್.ಪಿ.ಕಂಬಾಗಿ ಶ್ರೀಮತಿ ಶಾರದಾ ಗುಲಾಭ ರಾಠೋಡ ಎಸ್.ಡಿಎಂ.ಸಿ ಉಪಾಧ್ಯಕ್ಷರು. ಬಿ.ಬಿ.ಲಮಾಣಿ, ಶಿವಾನಂದ ಜಾಧವ, ನಿಜು ಮೇಲಿನಕೇರಿ ,ಆನಂದ್ ಮೂಲಿಮನಿ ,ರಾಜೇಶಕರ ಬನಸೋಡೆ ,ಬಿ.ಎಸ್ ಮಠ, ಝಡ್.ಐ.ಇಂಡಿಕರ ಊರಿನ ಗ್ರಾಮ ಪಂಚಾಯತ ಸದಸ್ಯರು ಹಾಗೂ ಎಲ್ಲ ಎಸ್.ಡಿ.ಎಂಸಿ ಸದಸ್ಯರು, ಉಪಸ್ಥಿತರಿದ್ದರು.
ಆಹೇರಿ ಹಾಗೂ ಅಂಕಲಗಿ ಗ್ರಾಮದ ಎಲ್ಲ ಎಲ್.ಪಿ.ಎಸ್,ಎಂ.ಪಿ.ಎಸ್, ಹಾಗೂ ಪ್ರೌಢಶಾಲೆ ಶಾಲೆಗಳ ಮುಖ್ಯಗುರುಗಳು, ನಿರ್ಣಾಯಕರಾಗಿ ಕೇಲಸ ಮಾಡಿದ ಗುರುಗಳು- ಗುರುಮಾತೆಯರು, ಹಾಗೂ ಸಹ- ಶಿಕ್ಚಕರು ಹಾಗೂ ಎಲ್ಲ ಶಾಲೆಗಳ ಮಕ್ಕಳು ಹಾಗೂ ಸಮಸ್ತ ಊರ ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಕಾರ್ಯಕ್ರಮವನ್ನು ಶ್ರೀ ಈರಣ್ಣ ಹೊಸಟ್ಟಿ ನಿರೂಪಿಸಿದರು. ಎಸ್.ಎಸ್‍ನಡವಿನಮನಿ ಮುಖ್ಯಗುರುಗಳು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ.ಕೋರಬು ಶಿಕ್ಷಕರು ಮಾಲಾರ್ಪಣಾ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಶ್ರೀಮತಿ ಶಾರದಾ ಅಂಗಡಿ ಮೇಡಂ ವಂದಿಸಿದರ. ಎ.ಎಲ್.ನಧಾಪ್ ಗುರುಗಳು ಹಾಗೂ ಎನ್.ಕೆ.ಚವ್ಹಾಣ ಗುರುಗಳು ಕಾರ್ಯಕ್ರಮದ ಮೇಲ್ವಿಚಾರಕರಾಗಿದ್ದರು.