ಆಹಾರ ಸ್ವೀಕರಿಸಲು ಧಾರವಾಡದಲ್ಲಿ ಸ್ವೀಕೃತಿ ಕೇಂದ್ರ ಆರಂಭ

ಧಾರವಾಡ,ಮೇ30: ಕೋವಿಡ್-19 ಸಾಂಕ್ರಾಮಿಕ ರೋಗವು ಹರಡಿರುವ ಪ್ರಯುಕ್ತ ಧಾರವಾಡ ಜಿಲ್ಲೆಯಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ಮಾಡಲಾಗಿದ್ದು, ವಾರಸುದಾರರಿಲ್ಲದೆ ರಸ್ತೆಯಲ್ಲಿ ಸಂಚರಿಸುವ ಮತ್ತು ವಾಸಿಸುವ ದನಗಳಿಗೆ ಮತ್ತು ನಾಯಿಗಳಿಗೆ ಮೇವು ಮತ್ತು ಆಹಾರ ಪೂರೈಸಲು ದಾನಿಗಳಿಂದ ಸ್ವೀಕರಿಸಲು ಸ್ವೀಕೃತಿ ಕೇಂದ್ರವನ್ನು ಮೇ.28 ರಂದು ಧಾರವಾಡ ಉಪ ನಿರ್ದೇಶಕರ ಕಛೇರಿ ಆವರಣದ, ಮುಖ್ಯ ಪಶುವೈಧ್ಯಾದಿಕಾರಿಗಳ ಕಛೇರಿಯಲ್ಲಿ ತೆರೆಯಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಸಂತೋಷ ಬಿರಾದಾರ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಗಿರೀಶ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಂಬುನಾಥ ಗದ್ದಿ, ಡಾ.ಅರವಿಂದ ಸರಾಫ್, ಮುಖ್ಯ ಪಶುವೈಧ್ಯಾಧಿಕಾರಿಗಳಾದ ಡಾ.ಶ್ರೀಕಾಂತ ಅರಗಂಜಿ, ಡಾ.ಮನೋಹರ ದ್ಯಾಬೇರಿ ಮತ್ತು ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಸಿರು ಮೇವು ಹಾಗೂ ಆಹಾರವನ್ನು ದಾನಿಗಳಿಂದ ಪಡೆದು ಧಾರವಾಡ ಶಹರದ ವಿವಿಧ ಬಡಾವಣೆಗಳಿಗೆ ಹೋಗಿ ವಾರಸುದಾರರಿಲ್ಲದೆ ರಸ್ತೆಯಲ್ಲಿ ಸಂಚರಿಸುವ ಮತ್ತು ವಾಸಿಸುವ ದನಗಳಿಗೆ ವಿತರಿಸಲಾಯಿತ್ತು. ಪಶು ಆಹಾರ ಮತ್ತು ನಾಯಿಗಳಿಗೆ ಆಹಾರ ಕೊಡುವ ದಾನಿಗಳು ಧಾರವಾಡ ಪಶು ಆಸ್ಪತ್ರೆಯ ಮುಖ್ಯಪಶುವೈದ್ಯಾಧಿಕಾರಿ ಡಾ.ಶ್ರೀಕಾಂತ ಅರಗಂಜಿ (9242242399) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.