ಆಹಾರ ಸಾಮಗ್ರಿ ವಿತರಣೆಗೆ ಮೆಚ್ಚುಗೆ

ಹುಬ್ಬಳ್ಳಿ,ಮೇ30: ಕೊರೊನಾ ಸಾಂಕ್ರಾಮಿಕ ರೋಗದಿಂದ ಲಾಕಡೌನ ಆಗಿ, ಜನರಿಗೆ ಕೆಲಸವಿಲ್ಲದೇ ತೀರ ಸಂಕಷ್ಟಕ್ಕೆ ಒಳಗಾದ ಜನರಿಗೆ, ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಹಡಪದ ತನ್ನ ವಾರ್ಡಿನ ಜನರಿಗೆ ದಾನಿಗಳು ನೀಡಿದ ಅಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಇವರೊಬ್ಬ ಮಾದರಿ ಸದಸ್ಯರಾಗಿ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.
ಇವರ ಈ ಕಾರ್ಯವನ್ನು ಮೆಚ್ಚಿ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯು ಇವರನ್ನು ಸತ್ಕರಿಸುವ ಮೂಲಕ ಇನ್ನೂ ಹೆಚ್ಚಿನ ಕೆಲಸ ನಿಮ್ಮಿಂದ ಆಗಲಿ ಎಂದು ಹಾರೈಸಿದರು. ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೂವಪ್ಪ ಸೂರ್ಯಕಾಂತಿ, ಮಾಜಿ ತಾಲ್ಲೂಕು ಪಂಚಾಯತಿ ಅದ್ಯಕ್ಷೆ ಸುಮಂಗಲಾ ಕೌದೆಣ್ಣವರ, ಯುವ ಸಮಾಜಮುಖಿ ಕಾರ್ಯಕರ್ತರಾದ ಮುದುಕಪ್ಪ ಮಲ್ಲಪ್ಪ ದೇಸಾಯಿ, ಈರಣ್ಣ ಚಪ್ಪರಮನಿ ಇದ್ದರು.
ಉಳ್ಳವರು ಇವರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡಬೇಕು ಉಳ್ಳವರು ಸಹಾಯ ಮಾಡಿದರೆ ಪ್ರಾಮಾಣಿಕವಾಗಿ ಬಡವರಿಗೆ ವಿತರಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು.