ಆಹಾರ ಸಚಿವರ ಹೇಳಿಕೆಗೆ ಖಂಡನೆ

ದಾವಣಗೆರೆ.ಏ.೨೯; ರೈತ ಈ ದೇಶದ ಬೆನ್ನೆಲುಬು ಆದರೆ ಅಂಥ ಬೆನ್ನಲುಬಾದ ರೈತರಿಗೆ ಆಹಾರ ಸಚಿವರಾದ ಉಮೇಶ್ ಕತ್ತಿಯವರು  ಮಾಡಿರುವ ಅವಮಾನ ಸಹಿಸಲು ಸಾಧ್ಯವಿಲ್ಲ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಮೊಹಮ್ಮದ್ ಜಿಕ್ರಿಯಾ ಹೇಳುದರು.ಈಗಾಗಲೇ ಕರ್ನಾಟಕ ಹಾಗೂ ದೇಶಾದ್ಯಂತ ಕೊರೊನ ಹೆಮ್ಮಾರಿ ಹಬ್ಬಿ ಜನ ರೋಸಿ ಹೋಗಿದ್ದಾರೆ. ರೋಗಿಗಳಿಗೆ ಆಕ್ಸಿಜನ್, ವ್ಯಾಕ್ಸಿನ್, ಆಸ್ಪತ್ರೆಲಿ ಬೆಡ್ ಸಿಗುತ್ತಿಲ್ಲ.ಅಂತದರಲ್ಲಿ  ಬಿಪಿಎಲ್ ಕಾರ್ಡಿಗೆ ನೀಡುವ ಸೌಲಭ್ಯಗಳ ಕುರಿತು ಅಸಂಭದ್ದ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಅಹಂಕಾರದ ಮಾತಿನಿಂದ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರು ಇಡೀ ರಾಜ್ಯದ ಜನತೆಯ ಹಾಗೂ ರೈತರ ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಹಾಗೂ ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.