ಆಹಾರ ಸಂಸ್ಕರಣ ಪದವಿಯಲ್ಲಿ ಕರ್ನಾಟಕ ಕಾಲೇಜು ಮೇಲುಗೈ

ಬೀದರ್: ಎ.21:ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಕರ್ನಾಟಕ ರಾಷ್ಟೀಯ ಶಿಕ್ಷಣ ಸಂಸ್ಥೆ ಅಡಿ ನಡೆಯುತ್ತಿರುವ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು 2018-19ರಲ್ಲಿ ಆರಂಭಿಸಿದ ಆಹಾರ ಸಂಸ್ಕರಣ ಪದವಿ(ಈooಜ Pಡಿoಛಿessiಟಿg ಛಿouಡಿse) 2021-22ರಲ್ಲಿ ಪ್ರಥಮ ಬ್ಯಾಚ್ ಹೊರ ಬಂತು. ಈ ಪದವಿ ಮೂಲಕ ಇತ್ತಿಚೀನ ದಿನಮಾನಕ್ಕೆ ಅಗತ್ಯವೆನಿಸಿರುವ ಬಿಸ್ಕಿಟ್, ಚಟ್ನಿ, ಜಾಮ್, ಕ್ರಿಮ್ ಇತ್ಯಾದಿ ತಿಂಡಿ ತಿನಿಸು ಗಳು ತಯ್ಯಾರಿಸುವ ಮೂಲಕ ಅಲ್ಲಿಯ ವಿದ್ಯಾರ್ಥಿಗಳು ಭೇಸ್ ಎನಿಸಿಕೊಂಡಿರುವರು. ವಿದ್ಯಾರ್ಥಿಗಳು ಸಂಸ್ಕರಿಸಿರುವ ಈ ಆಹಾರ ಪದಾರ್ಥಗಳನ್ನು ನಗರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ತವಕದಲ್ಲಿದ್ದಾರೆ. ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಈ ಕೋರ್ಸ್ ನಡೆಯುತ್ತಿರುವುದು ಗಮನಾರ್ಹ ಸಂಗತಿ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕರ್ನಾಟಕ ರಾಷ್ಟೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಉಪಾಧ್ಯಕ್ಷ ಬಿ.ಜಿ ಶಟಕಾರ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ್ ಹಂಗರಗೆ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಈ ಸಾಧನೆ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಒಂದು ಮೈಲಿಗಲ್ಲಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಮ್ಮ ವಿದ್ಯಾರ್ಥಿಗಳು ಸಾರ್ವಜನಿಕರ ಆಶೋತ್ತರಗನುಗುಣವಾಗಿ ಇನ್ನು ನವೀನ ಮಾದರಿಯ ತಿಂಡಿ ತಿನಿದುಗಳನ್ನು ತಯ್ಯಾರಿಸಿ ರಾಜ್ಯಕ್ಕೆ ಮಾದರಿಯಾಗಿ ಹೊರ ಹೊಮ್ಮಲಿ ಎಂದು ಆಶಿಸುವುದಾಗಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.