ಆಹಾರ ಪದಾರ್ಥ, ದಿನಸಿ ಧಾನ್ಯ ವಿತರಣೆ

ನಂಜನಗೂಡು:ಏ:08: ತಾಲೂಕು ಹೊಸೂರು ವರಳವಾಡಿ ಗ್ರಾಮದ ರಸ್ತೆಯ ಬಲಭಾಗದಲ್ಲಿರುವ ಹಂದಿಜೋಗಿಯಲ್ಲಿ ಸುಮಾರು 50 ವರ್ಷದಿಂದ ಎರಡು ಕುಟುಂಬದವರು ವಾಸವಾಗಿತ್ತು ಬದುಕಲು ಬೇಕಾಗಿರುವ ವಿದ್ಯುತ್ ಕುಡಿಯುವ ನೀರು ಹಾಗೂ ಇತರ ಸೌಲಭ್ಯ ಇಲ್ಲದೆ ಬದುಕುತ್ತಿರುವ ಕುಟುಂಬದವರನ್ನು ಸುಜೀವ ಸಂಸ್ಥೆಯ ಅಧ್ಯಕ್ಷರಾದ ರಾಜಾರಾಮ್ ರವರು ಬೇಟಿ ಮಾಡಿ ಅವರಿಗೆ ಆಹಾರ ಪದಾರ್ಥಗಳು ಮತ್ತು ದಿನಸಿ ಧಾನ್ಯವನ್ನು ವಿತರಿಸಿದರು ಹಾಗೂ ವಾಸಿಸಲು ಮನೆ ಇಲ್ಲದೆ ಇರುವುದರಿಂದ ಮನೆ ಕಟ್ಟಡ ಸ್ಥಳವನ್ನು ಕೊಡಬೇಕಾಗಿ ಸರ್ಕಾರದ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಹಾಯ ಮಾಡುವುದಾಗಿ ಸುಜೀವ ಸಂಸ್ಥೆಯ ಅಧ್ಯಕ್ಷರಾದ ರಾಜಾರಾಮ್ ನವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾದೇವ್, ರೋಹಿತ್ ಹಾಗೂ ಇನ್ನಿತರರು ಭಾಗವಹಿಸಿದರು.