ಆಹಾರ ಪದಾರ್ಥ,ಸ್ಯಾನಿಟೈಸರ್ ವಿತರಣೆ

ಕೋಲಾರ,ಮೇ.೨೯:ಕೋಲಾರ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಆರ್.ಶ್ರೀರಾಮುಲು ರವರ ಪರವಾಗಿ ಜಿಲ್ಲಾ ಗೌರವಾಧ್ಯಕ್ಷ ಎಸ್.ಮಂಜುನಾಥ್ ರವರು ಕೋಲಾರ ನಗರದ ಅಮ್ಮನ ಮಡಿಲು ಅನಾಥಾಶ್ರಮದಲ್ಲಿ ಅನಾಥ ಮಕ್ಕಳಿಗೆ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಎಣ್ಣೆ, ಮಾಸ್ಕ್, ಸಾನಿಟೈಜರ್, ಸೋಪು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಸ್. ಮಂಜುನಾಥ್ ರವರು ಮಾತನಾಡಿ, ಸವಿತಾ ಸಮಾಜದವರು ತೀರ ಹಿಂದುಳಿದಿದ್ದು, ಕ್ಷೌರಿಕ ವೃತ್ತಿ ಹಾಗು ಕಲಾವಿದರು ನಾದಸ್ವರ ಡೋಲು ನುಡಿಸುವ ವೃತ್ತಿಯನ್ನೆ ನಂಬಿಕೊಂಡಿದ್ದಾರೆ. ಕೋವೀಡ್-೧೯ರ ಕಾರಣದಿಂದಾಗಿ ಅಂಗಡಿ ತೆರೆಯಲು ಅನುಮತಿ ಇರುವುದಿಲ್ಲ. ಕಲಾವಿದರಿಗೆ ಮದುವೆ, ಜಾತ್ರೆ, ದೇವಸ್ಥಾನ ಮುಂತಾದ ಶುಭ ಸಮಾರಂಭಗಳಿಲ್ಲದೆ ತುಂಬಾ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗ ಅನುದಾನ ಘೋಷಣೆ ಮಾಡಿರುವುದು ತುಂಬಾ ಸಂತೋಷದ ವಿಷಯವೇ ಸರಿ. ಆದರೆ ಈ ಅನುದಾನದಿಂದ ಯಾವುದೇ ರೀತಿಯ ಸಹಾಯ ಆಗುವುದಿಲ್ಲ. ಕಳೆದ ವರ್ಷ ಕಲಾವಿದರಿಗೆ ೨೦೦೦, ಕ್ಷೌರಿಕರಿಗೆ ೫೦೦೦,ಪರಿಹಾರವೇ ಸುಮಾರು ಜನರಿಗೆ ಸಿಕ್ಕಲಿಲ್ಲ. ಈ ಭಾರಿ ನಮ್ಮ ಸಮಾಜದ ಪ್ರತಿಯೊಬ್ಬರಿಗೂ ತಲುಪುವ ಕೆಲಸ ಆಗಲಿ ಆದರೆ ಕ್ಷೌರಿಕರಿಗೆ ಹಾಗು ಕಲಾವಿದರಿಗೆ ಸಮವಾಗಿ ೧೦.೦೦೦ ರೂ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅನಾಥಾಶ್ರಮಗಳಿಗೆ ಎಲ್ಲಾ ರೀತಿಯ ಸಂಘ ಪರಿವಾರದವರು, ಉಳ್ಳವರು, ಸಹಾಯ ಹಸ್ತ ಒದಗಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಂಗಾರಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಎಸ್.ಜಿ.ನಾಗರಾಜ್. ಮಾಸ್ತಿ ಹೋಬಳಿ ಸವಿತಾ ಸಮಾಜದ ಅಧ್ಯಕ್ಷ ಟಿ.ಚಂದ್ರಶೇಖರ್. ಮುಖಂಡರಾದ. ಎಸ್.ವೆಂಕಟೇಶ್, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.