ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಯಶವಂತ್ ರಾಜ್ ನಾಗಿರೆಡ್ಡಿ ಮುಖ್ಯ ಅತಿಥಿಗಳನ್ನು ಸ್ವಾಗತ ಮಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವರ್ತಕರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ ಹಮ್ಮಿಕೊಳ್ಳುವುದು ತುಂಬ ಅವಶ್ಯಕವಾಗಿದೆ ಎಂದು ತಿಳಿಸಿದರು. ಈ ಕಾರ್ಯಗಾರದಲ್ಲಿ ಬರುವ ಸಂಶಯದ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಿತಿಳಿದು ಕೊಳ್ಳಬಹುದು ಎಂದು ತಿಳಿಸಿದರು.
ದಾವಣಗೆರೆಯ ಐ.ಸಿ.ಟಿ.ಪಿ.ಐ ಟಿ.ಸಿ.ಚೇರ್ಮನ್ ಹೆಚ್.ಟಿ.ಸುಧೀಂದ್ರರಾವ್, ಬಳ್ಳಾರಿ ಎನ್.ಐ.ಸಿ.ಟಿ.ಪಿ.ಐ ಚೇರ್ಮನ್ ಶ್ರೀಧರಪಾರ್ಥಸಾರಥಿ, ತೂಕ ಮತ್ತು ಮಾಪನ ಇಲಾಖೆ ಸಹಾಯಕ ನಿಯಂತ್ರಕರು ಶ್ರೀಮತಿ ಅಮೃತಾ ಪಿ.ಚವ್ಹಾಣ್,  ಈ ಕಾರ್ಯಗಾರವನ್ನು ಉದ್ದೇಶಿಸಿ ಇತ್ತೀಚೆಗೆ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಬದಲಾವಣೆಗಳನ್ನು ಸವಿವರವಾಗಿ ತಿಳಿಸುತ್ತಾ ಸಭಿಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದರು,ಕೆಲವು ಬಗೆಹರಿಯದ ಪ್ರಶ್ನೆಗಳಿಗೆ ಜಿ.ಎಸ್.ಟಿ ಪರಿಷತ್‍ಗೆ ಪತ್ರ ಬರೆಯುವುದಾಗಿ ಛೇಂಬರ್ ಆಫ್ ಕಾಮರ್ಸ್ ಗೆ ಗೌರವ ಕಾರ್ಯದರ್ಶಿಗಳು ಯಶವಂತರಾಜ್ ನಾಗಿರೆಡ್ಡಿ  ತಿಳಿಸಿದರು
ಕಾರ್ಯಾಗಾರವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಎಲ್ಲಾ ಪದಾಧಿಕಾರಿಗಳು ಹೊಗುಚ್ಚು ನೀಡುವುದರ ಮೂಲಕ ಮುಖ್ಯ ಅತಿಥಿಗಳನ್ನು ಗೌರವಿಸಿದರು.
ಈ ವೇಳೆ ಸಂಸ್ಥೆಯ ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷರು, ಎ.ಮಂಜುನಾಥ, ಉಪಾಧ್ಯಕ್ಷರು, ಕೆ.ರಮೇಶ್‍ಬೊಜ್ಜಿ ಉಪಾದ್ಯಕ್ಷರು. ವಿ.ರಾಮಚಂದ್ರ,ಚೇರ್ಮನ, ಎ.ಪಿ.ಎಂ.ಸಿ.ಕಮಿಟಿ, ಟಿ.ಶ್ರೀನಿವಾಸ್ ರಾವು ಪತ್ರಿಕೆ ಮತ್ತು ಮಾದ್ಯಮ, ಎ. ಚನ್ನಪ್ಪ, ಯು.ಗೋವಿಂದರೆಡ್ಡಿ, ಎಲ್ಲಾ ಸದಸ್ಯರು, ರೈಸ್‍ಮಿಲ್‍ಅಸೋಸಿಯೇಷನ್,ಎ.ಪಿ.ಎಂ.ಸಿ.ವರ್ತಕರು, ಸಗಟು ವ್ಯಾಪರಸ್ಥರು, ಕಿರಣ ವರ್ತಕರು, ರಿಟೇಲ್ ವ್ಯಾಪರಸ್ಥರು ಎಲ್ಲಾ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.