ಆಹಾರ ಪದಾರ್ಥಗಳ ಗೋದಾಮಿಗೆ ತೆರಳಿ ಪರಿಶೀಲಿಸಿದ:ಇಓ ಶಂಕರ್ ರಾಠೋಡ್

ಸೇಡಂ,ಜೂ,17: ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ಶಾಲಾ ಮಕ್ಕಳಿಗೆ ಬಿಸಿ ಊಟಕ್ಕೆ ವಿತರಿಸಲಾಗುವ ಅಕ್ಕಿ,ತೊಗರಿ ಬೆಳೆ, ಗೋದಿ ಸಂಗ್ರಹಿಸುವ ಗೋದಾಮಿಗೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ್, ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಸಂಗ್ರಹಿಸುವ ಇತರ ಆಹಾರ ಪದಾರ್ಥಗಳು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಶಾಲೆಗೆ ಕಳಿಸುವ ಮುನ್ನ ಸರಿ ಇರುವುದನ್ನು ಪರಿಶೀಲಿಸಿ ಕಳಿಸುವಂತೆ ಸಿಬ್ಬಂದಿ ವರ್ಗದವರಿಗೆ ಸೂಚಿಸಿದರು.