ಆಹಾರ ಪದಾರ್ಥಗಳ ಕಿಟ್ ವಿತರಣೆ

 ಚನ್ನಗಿರಿ.ಜೂ.೧೧; ಇಲ್ಲಿನ ಹಾಲಸ್ವಾಮಿ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ವತಿಯಿಂದ 600  ಆಹಾರ ಪದಾರ್ಥಗಳ ಕಿಟ್ ಅನ್ನು ಪರಮಪೂಜ್ಯ ಶ್ರೀ  ಬಸವಜಯಚಂದ್ರ  ಮಹಾಸ್ವಾಮಿಗಳೊಂದಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ವಿತರಣೆ  ಮಾಡಿದರು..ನಂತರ ತಾಲ್ಲೂಕು ಬಿಜೆಪಿ  ಓಬಿಸಿ ಮೋರ್ಚಾ ವತಿಯಿಂದ ಕಾಕನೂರು ಕೋವಿಡ್ ಕೇರ್  ಸೆಂಟರ್‌ನಲ್ಲಿರುವ ಸೋಂಕಿತರಿಗೆ  ಶಾಸಕರ ನೇತೃತ್ವದಲ್ಲಿ  ಹಣ್ಣು ಮತ್ತು ಬ್ರೆಡ್ . ವಿತರಣೆ ಮಾಡಲಾಯಿತು.ನಂತರ ಸಂತೇಬೆನ್ನೂರ ಪದವಿ ಪೂರ್ವ ಕಾಲೇಜು ಕಟ್ಟಡ ವೀಕ್ಷಣೆ ಮಾಡಿದರು.