ಆಹಾರ ಪದಾರ್ಥಗಳಿಗೆ ಜಿಎಸ್‌ಟಿ ಮೂರ್ಖತನದ ಪರಮಾವಧಿ: ಶಶಿ

ನವದೆಹಲಿ,ಜು.೨೧- ಮೊಸರು, ಪನ್ನೀರ್ ಇತ್ಯಾದಿ ಪ್ಯಾಕೇಜ್ ಮಾಡಿದ ದೈನಂದಿನ ಬಳಕೆಯ ಆಹಾರ ಪದಾರ್ಥಗಳ ಮೇಲೆ ಶೇ.೫ ಕ್ಕಿಂತ ಹೆಚ್ಚಿನ ಜಿಎಸ್ ಟಿ ವಿಧಿಸಿರುವುದು ಮೂರ್ಖತನದ ಪರಮಾವಧಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ.

ಪನೀರ್ ಬಟರ್ ಮಸಾಲಾ ಖಾದ್ಯದ ಒಟ್ಟಾರೆ ಜಿಎಸ್ ಟಿ ವಿಧಿಸಿರುವ ಲೆಕ್ಕಾಚಾರ ಆಧುನಿಕ-ದಿನದ ಗಣಿತದ ಸಮಸ್ಯೆ ರೂಪದಲ್ಲಿ ಟ್ವಿಟ್ಟರ್ ರೂಪದಲ್ಲಿ ಟ್ರೆಂಡಿಂಗ್ ಆಗಿದೆ.

ಪನೀರ್ ಬಟರ್ ಮಸಾಲಾ ಕುರಿತು ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಶಶಿ ತರೂರ್, ವಾಟ್ಸಾಪ್ ಫಾರ್ವರ್ಡ್ ಅದ್ಭುತವಾಗಿದೆ,ದಿನ ಬಳಕೆಯ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿಯ ಮೂರ್ಖತನ ಬಿಂಬಿಸಿದೆ ಎಂದು ತಿಳಿಸಿದ್ದಾರೆ.

ಪನೀರ್ ಬಟರ್ ಮಸಾಲಾ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್ ಆಗಿದೆ. ಇತ್ತೀಚೆಗಷ್ಟೇ ದಿನಬಳಕೆಯ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿದರೆ ಮಾತ್ರ ಶೇ.೫ರಷ್ಟು ಜಿಎಸ್ ಟಿ ಕೇಂದ್ರ ವಿಧಿಸಿದೆ. ಪ್ಯಾಕೇಜ್ ಮಾಡಿದ ಪನೀರ್, ಮೊಸರು ಮತ್ತು ಮಸಾಲೆಗಳು ಇದರ ಅಡಿಯಲ್ಲಿ ತಂದಿರುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಜಿಎಸ್‌ಟಿಯ ಮೇಲಿನ ರಾಜಕೀಯ ವಾಗ್ದಾಳಿ ಮುಂದುವರೆದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಗಣಿತದ ಸಮಸ್ಯೆ ಪರಿಹರಿಸುವಲ್ಲಿ ವಾಗ್ದಾಳಿ ನಡೆಸಿದ್ದಾರೆ

ಪನೀರ್ ಮೇಲೆ ಶೇ.೫ ರಷ್ಟು ಜಿಎಸ್ ಟಿ,, ಬೆಣ್ಣೆ ಮೇಲೆ ಶೇ ೧೨ ರಷ್ಟು ಮತ್ತು ಮಸಾಲೆ ಮೇಲೆ ಶೇ ೫ ರಷ್ಟು ಜಿಎಸ್ ಟಿ ವಿಧಿಸಿರುವುದು ಟ್ವಿಟ್ಟರ್ ನಲ್ಲಿ ನಾನಾ ವ್ಯಾಖ್ಯಾನಕ್ಕೆ ವೇದಿಕೆ ಕಲ್ಪಿಸಿದೆ.

ಅಗತ್ಯ ವಸ್ತುಗಳಿಗೆ ಜಿಎಸ್ ಟಿ ವಿಧಿಸಿರುವದನ್ನು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “ಬಡ ಗ್ರಾಹಕರು ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ವಸ್ತುಗಳನ್ನು ಖರೀದಿಸಲು ಏಕೆ ಬಯಸಬಾರದು ಮೋದಿ ಸರ್ಕಾರ ಆಕಾಂಕ್ಷೆ ಮತ್ತು ಹೆಚ್ಚು ನೈರ್ಮಲ್ಯವಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಖರೀದಿಸುವುದು ಯಾಕೆ ಎಂದು ಪ್ರಶ್ನಿಸಿದೆ.