ಆಹಾರ ಧಾನ್ಯ : ೨೫ ಕೆಜಿ ಮೇಲ್ಪಟ್ಟು ಜಿಎಸ್‌ಟಿ – ಹೋರಾಟಕ್ಕೆ ಜಯ

ರಾಯಚೂರು.ಜು.೧೯- ಆಹಾರ ಧಾನ್ಯಗಳ ಮೇಲೆ ಶೇ.೫ ರಷ್ಟು ಜಿಎಸ್‌ಟಿ ಏರಿಕೆ ವಿರುದ್ಧ ಜು.೧೫ ರಂದು ನಡೆದ ವ್ಯಾಪಾರಸ್ಥರ ಹೋರಾಟ ಫಲಕಾರಿಯಾಗಿದೆಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮತ್ತು ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪೂರು ಅವರು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತಡ ತಂದ ಪರಿಣಾಮ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ೨೫ ಕೆಜಿ ಮೇಲ್ಪಟ್ಟ ಪ್ಯಾಕೇಟ್‌ಗಳ ಮಾರಾಟಕ್ಕೆ ಮಾತ್ರ ನಿಗದಿಗೊಳಿಸಿದೆ. ಇದರಿಂದ ಜನ ಸಾಮಾನ್ಯರು ಮತ್ತು ರೈತರಿಗೆ ನಿರಾಳ ಉಂಟಾದಂತಾಗಿದೆ. ಇದು ಜಿಲ್ಲೆಯ ಹೋರಾಟಕ್ಕೆ ಸಂದ ಜಯವಾಗಿದೆಂದು ಇಂದಿನ ಸಭೆಯಲ್ಲಿ ಹೇಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಎ.ಪಾಪಾರೆಡ್ಡಿ, ಬೆಲ್ಲಂ ನರಸರೆಡ್ಡಿ, ಹರವಿ ನಾಗನಗೌಡ, ಮೈಲಾಪೂರು, ಮೂರ್ತಿ, ವೆಂಕಣ್ಣ, ಕೊಂಡ ವಿಠ್ಠೋಬಾ, ಸಾವಿತ್ರಿ ಪುರುಷೋತ್ತಮ, ಮಾರಂ ತಿಪ್ಪಣ್ಣ, ಗಧಾರ್ ಬೆಟ್ಟಪ್ಪ, ವಿಶ್ವನಾಥ ಪಾಟೀಲ್ ಕ್ಯಾದಿಗೇರಿ, ಮರಡಿ ಲಕ್ಷ್ಮೀ ನರಸಯ್ಯ ಇನ್ನಿತರು ಉಪಸ್ಥಿತರಿದ್ದರು.