ಆಹಾರ ಧಾನ್ಯ ವಿತರಣೆ


ಲಕ್ಷ್ಮೇಶ್ವರ, ಮೇ 31: ಕೋವಿಡ್ ವಾರಿಯರ್’ಗಳಾದ ಪತ್ರಕರ್ತರು, ರುದ್ರಭೂಮಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊಂಚಿಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ಮಹೇಶ ಮೇಟಿ ಇವರ ಸಹಯೋಗದೊಂದಿಗೆ ಆಹಾರ ಧಾನ್ಯಗಳ ಪ್ಯಾಕೆಟ್, ಮಾಸ್ಕ್, ಸ್ಯಾನಿಟೈಸರ್’ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷರಾದ ಫಕ್ಕೀರೇಶ ರಟ್ಟಿಹಳ್ಳಿ, ಉಪಾಧ್ಯಕ್ಷರಾದ ಪ್ರಕಾಶ ಮಾದನೂರ, ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷರಾದ ದುಂಡೇಶ ಕೊಟಗಿ, ಉಪಾಧ್ಯಕ್ಷರಾದ ರುದ್ರಪ್ಪ ಉಮಚಗಿ, ಸಂಗಮೇಶ ಬೆಳವಲಕೊಪ್ಪ, ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ವಿಜಯ ಕುಂಬಾರ, ಕಾರ್ಯದರ್ಶಿಗಳಾದ ಪ್ರವೀಣ ಬೋಮಲೆ, ಸಿದ್ದಪ್ಪ ದುರಗಣ್ಣವರ, ಚಂದ್ರು ಹಂಪಣ್ಣವರ, ಶಿರಹಟ್ಟಿ ಮಂಡಲ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರಾದ ಮಂಜುನಾಥ ಉಳ್ಳಾಗಡ್ಡಿ, ಬಸವರಾಜ ಕಲ್ಲೂರ, ಗಂಗಾಧರ ಕರ್ಜೆಕಣ್ಣವರ, ಬಸವರಾಜ ಚಕ್ರಸಾಲಿ, ಅಭಯ ಜೈನ್, ವಿಶಾಲ್ ಬಟಗುರ್ಕಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.