ಆಹಾರ ಧಾನ್ಯ ವಿತರಣೆ ಪುಣ್ಯದ ಕಾರ್ಯ:ಹೊರಟ್ಟಿ

ಧಾರವಾಡ ಜೂ.8: ವಿಕಲಚೇತನ ಮಕ್ಕಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರಕಾರದ ಎಲ್ಲ ಸೌಲಭ್ಯಗಳು ಸವಲತ್ತುಗಳು ವಿಕಲಚೇತನ ಮಕ್ಕಳಿಗೆ ದೊರಕುವಂತೆ ಮಾಡಬೇಕು ಎಂದು ಹೇಳಿದರು.
ಮಲಬಾರ ಚಾರಟೇಬಲ್ ಟ್ರಸ್ಟ್, ಜನಮುಖಿ ಸ್ವಯಂ ಸೇವಾ ಸಂಸ್ಥೆಯ, ಧಾರವಾಡ ಇದರ ಸಹಯೋಗದೊಂದಿಗೆ ಶ್ರೀನಗರದ ಜನಮುಖಿ ತರಬೇತಿಕೆಂದ್ರದಲ್ಲಿ ಕಿಟ್ ವಿತರಿಸಿ ಮಾತನಾಡುತ್ತಾ ವಿಕಲಚೇತನ ಮಕ್ಕಳು ಅಸಮರ್ಥರಲ್ಲ, ಮಾನಸಿಕ ಹಾಗೂ ದೈಹಿಕ ಅಂಗವೈಕಲ್ಯ ಅವರ ಸಾಮಥ್ರ್ಯಕ್ಕೆ ಮಿತಿಯಾಗಬಾರದು. ಅವರಲ್ಲಿನ ಅದಮ್ಯಚೇತನ ಅಂಗವೈಕಲ್ಯ ಮಾತ್ರದಿಂದ ಮರೆÉಯಾಗಿ ಹೋಗಕೂಡದು. ಅದರ ಬದಲಾಗಿ ವಿಕಲಚೇತನ ಮಕ್ಕಳಿಗೆ ದೊರಬೇಕಾದ ಶಿಕ್ಷಣ, ಆರೋಗ್ಯ, ಹಾಗೂ ಉತ್ತಮವಾದ ಪೌಷ್ಠಿಕಾಂಶವುಳ್ಳ ಆಹಾರಧಾನ್ಯಗಳ ಕಿಟ್ ಕೊಡಿಸುವದರ ಮುಖಾಂತರ ಜನಮುಖಿ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು. ಮಲಬಾರ ಗೋಲ್ಡ್‍ನವರು ಪ್ರಾಯೋಜಿಸಿದ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಿ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಗಳು ಮುಕ್ತ ಹಸ್ತದಿಂದ ನೀಡುವ ಕಾರ್ಯ ನಡೆಯಬೇಕೆಂದು ಹೇಳಿದರು. ವಿಕಲಚೇತನರ ಬದುಕಿಗೆ ಆಸರೆಯಾಗುವ, ಭರವಸೆ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅವ್ವ ಟ್ರಸ್ಟ್‍ನಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದರು. 200 ಜನ ಫಲಾನುಭವಿಗಳಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಹುದ್ದಾರ, ಶಿಕ್ಷಣದ ಮುಖ್ಯವಾಹಿನಿಯ ಭಾಗವಾಗಲು ಬಾಲ್ಯದಿಂದಲೇ ಅವರು ಶಿಕ್ಷಣವನ್ನು ಔಪಚಾರಿಕ ಶಿಕ್ಷಣದೊಂದಿಗೆ ಸಮನ್ವಯಗೊಳಿಸುವುದ ಅತ್ಯವಶ್ಯವಾಗಿದೆ ಎಂದು ಹೇಳಿದರು. ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೀರಿಶ ಪದಕಿ, ಧಾರವಾಡ ಗ್ರಾಮೀಣ ಬಿ.ಈ.ಓ ಉಮೇಶ ಬೊಮ್ಮಕ್ಕನವರ, ಸಿ.ಆರ್.ಪಿ. ಎಸ್.ಎನ್. ಇದಿಯಮ್ಮನವರ, ಜನಮುಖಿ ಸಂಸ್ಥೆಯ ವಿದ್ಯಾ ಮ್ಯಾಗೇರಿ, ಚೇತನ ಅಸ್ವಿ, ಮಂಜುನಾಥ ಜಮನಾಳ, ಎಂ.ಎನ್. ಗೌಡರ, ರಾಜು ಗಿರಿಯಪ್ಪನವರ, ಪ್ರದೀಪ ಮೇಲ್ಗಡೆ, ಮತ್ತು ಮಲಬಾರ ಗೋಲ್ಡಿನ್ ಇರ್ಫಾನ್ ಬಳ್ಳಾರಿ, ನಿಯಾಜ್ ಅವರು ವೇದಿಕೆ ಮೇಲಿದ್ದರು.