ಆಹಾರ ಧಾನ್ಯ ಕಿಟ್‍ಗಳ ವಿತರಣೆ

ಬೀದರ: ಜೂ.2:ಡಾ|| ಬಿ.ಆರ್ ಅಂಬೇಡ್ಕರ ಕಲ್ಚರಲ ಐಂಡ ವೇಲ್ಫೇರ ಸೋಸ್ಶೆಟಿ ಬೀದರ ವತಿಯಿಂದ ನಡೆಯುತ್ತಿರುವ ನವಜಿವನ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ 18 ವರ್ಷ ಮೇಲ್ಪಟ್ಟ ಬುದ್ದಿಮಾಂದ್ಯ ಮಕ್ಕಳೀಗೆ ಹಾಗೂ ಹಿರಿಯ ನಾಗರಿಕರಿಗೆ ಮತ್ತು ದೈಹಿಕ ವಿಕಲಚೇತನರಿಗೆ ವ್ಯಾಕ್ಸಿನೇಷನ ಡ್ರೈವ ಹಾಗೂ ಜಾಗೃತಿ ಕಾರ್ಯಕೃಮ ಹಮ್ಮಿಕೊಳ್ಳಲಾಯಿತು.
ತಹಸಿಲ್ದಾರ ಗಂಗಾದೇವಿ ಹೆಚ್.ಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ದೈಹಿಕ ವಿಕಲಚೇತನರು, ಬುದ್ದಿಮಾಂದ್ಯ ಮಕ್ಕಳು ಮತ್ತು ಅವರ ಆರೈಕೆದಾರರು, ಅವರ ಪಾಲಕರು ತಪ್ಪದೆ ತಮ್ಮ ಆರೊಗ್ಯ ಸದೃಢವಾಗಿರಲು ವ್ಯಕ್ಸಿನೇಷನ ತೆಗೆದುಕೊಳ್ಳಲೆಬೇಕೆಂದರು.
ಸಂಸ್ಥೆ ವತಿಯಿಂದ ಅಕ್ಕಿ, ತೊಗರಿ ಬೆಳೆ, ಕಡಲೆ ಬೆಳೆ, ಎಣ್ಣೆ, ಚಾಯ ಪುಡಿ, ಹಾಗೂ ಇನ್ನಿತರ ಅಗತ್ಯ ದಿನಸಿ ವಸ್ತುಗಳು ನೂರಾರು ಬುದ್ದಿಮಾಂಧ್ಯ ಮಕ್ಕಳ ಪಾಲಕರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ವಿತರಿಸಿದರು,
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ತಾಲೂಕು ಆರೋಗ್ಯಾಧಿಕಾರಿ ಡಾ|| ಸಂಗಾರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಸಂಸ್ಥೆ ನಿರ್ದೆಶಕ ಅನೀಲಕುಮಾರ ಬೆಲ್ಧಾರ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ, ಬುದ್ದಿಮಾಂದ್ಯ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿದ್ದರು.