ಆಹಾರ ಧಾನ್ಯಗಳ ಮೇಲಿನ ಶೇ.5 ಜಿ.ಎಸ್.ಟಿ. ತೆರಿಗೆ ಹೇರಿಕೆ ವಿರುದ್ದ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.15: ನಗರದಲ್ಲಿ ಇಂದು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದಿಂದ ಆಹಾರ ಧಾನ್ಯಗಳ ಮೇಲಿನ ಶೇ.5 ಜಿ.ಎಸ್.ಟಿ. ತೆರಿಗೆ ಹೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಮತ್ತು ಗೌರವ ಕಾರ್ಯದರ್ಶಿ ಯಶ್‌ವಂತ್‌ ರಾಜ್‌ ನಾಗಿರೆಡ್ಡಿ, ಅವರು ಮನವಿ ಪತ್ರ ಸಲ್ಲಿಸಿ
ಕಳೆದ ಜೂನ್ 28 ಮತ್ತು 29ರಂದು ನಡೆದ ಜಿ. ಎಸ್. ಟಿ. ಕೌನ್ಸಿಲ್‌ ಸಭೆಯಲ್ಲಿ ಸಮಾಜದ ಕಟ್ಟ ಕಡೆಯ ವರ್ಗವೂ ದಿನ ನಿತ್ಯ ಬಳಸುವ ಆಹಾರ ಧಾನ್ಯಗಳ ಮೇಲೆ ಶೇ.5 ರಷ್ಡು ಜಿ. ಎಸ್. ಟಿ ತೆರಿಗೆ ವಿಧಿಸಲು ನಿರ್ಧರಿಸಿದೆ.  ಇದು ಸಮಂಜಸವಲ್ಲ ಹಾಗೂ ಈಗಾಗಲೇ ತೊಂದರೆಯಲ್ಲಿರುವ ಭತ್ತ ಬೆಳೆಯುವ ರೈತರ ಮೇಲೆ ಇದರ ಪರಿಣಾಮ ಬೀರುತ್ತದೆ ಎಂದು ಸರ್ಕಾರದ ವಿರುದ್ದ  ಘೋಷಣೆ ಕೂಗುತ್ತಾ, ಜಿ.ಎಸ್.ಟಿ. ತೆರಿಗೆ ಹೇರಿಕೆ ವಿರುದ್ಧ ಖಂಡಿಸಲಾಯಿತು.
ಈ ವೇಳೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಮಹಾರುದ್ರಗೌಡ,ಮಂಜುನಾಥ ಉಪಾಧ್ಯಕ್ಷರಾದ ಕೆ.ರಮೇಶ್‌ಬೊಜ್ಜಿ.ಕೆ.ಸಿ.ಸುರೇಶ್ ಬಾಬು, ಎಸ್.ದೊಡ್ಡನಗೌಡ.ಜಂಟಿಕಾರ್ಯದರ್ಶಿಗ ಶ್ರೀನಿವಾಸ್‌ ರಾವು, ಎಸ್.ಆರ್.ಕಮಿಟಿ, ಚೇರ್ಮನ್, ಶ ವಿ. ರಾಮಚಂದ್ರ, ಚೇರ್‌ ಮನ್, ಎ.ಪಿ.ಎಂ.ಸಿ. ಕಮಿಟಿ, .ಟಿ.ಶ್ರೀನಿವಾಸ್ ರಾವು ಪತ್ರಿಕೆ ಮತ್ತು ಮಾದ್ಯಮ, ಅಕ್ಕಿ ಗಿರಾಣಿ ಎ.ಪಿ.ಎಂ.ಸಿ ದಲ್ಲಾಲಿ ವರ್ತಕರ ಅಸೋಸಿಯೇಷನ್‌, ಹೋಲ್ ಸೇಲ್ ಮರ್ಚೆಂಟ್ಸ್ ಅಸೋಸಿಯೇಷನ್ ಬಳ್ಳಾರಿ ಜಿಲ್ಲಾ ಕೈಗಾರಿಕಾ ಅಸೋಸಿಯೇಷನ್, ಸಗಟು ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸ್ಥೆಯ ವಿಶೇಷ ಆಹ್ವಾನಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.